ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹೊನ್ನಾವರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಭಾಷಾ ಅಭಿವೃದ್ಧಿ ವಿಚಾರ ಸಂಕಿರಣ

ಉತ್ತರ ಕನ್ನಡ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು, ಹೊನ್ನಾವರ ತಾಲೂಕಾ ಕ.ಸಾ.ಪ ಘಟಕ ಹಾಗೂ ಹೊನ್ನಾವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಭಾಷಾ ಅಭಿವೃದ್ಧಿಯ ಒಂದು ದಿನದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು…

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಜಾನಪದ ವಿದ್ವಾಂಸ ಡಾ.ಎನ್ ಆರ್ ನಾಯ್ಕ, ಕರಾವಳಿ ಕನ್ನಡ ಪಕ್ಕಾ ಕನ್ನಡ. ಕನ್ನಡವನ್ನು ಪರಿಶುದ್ದವಾಗಿಟ್ಟಿದ್ದು ಕರಾವಳಿ ಜನ, ಜಾನಪದರು, ಯಕ್ಷಗಾನ ಕಲಾವಿದರು. ಯಕ್ಷಗಾನದಲ್ಲಿ ಅತಿ ಪರಿಶುದ್ದ ಕನ್ನಡ ಪದ ಬಳಕೆಯಾಗುತ್ತದೆ ಎಂದರು‌. ಜಾಗತಿಕವಾಗಿ ಸಾಂಸ್ಕೃತಿಕ ಮಟ್ಟದಲ್ಲಿಯೂ ಕೂಡ ಕನ್ನಡಕ್ಕೆ ಬೆಲೆ ಇದೆ ಎಂದು ಕನ್ನಡ ಭಾಷೆಯ ಮಹತ್ವವನ್ನು ವಿವರಿಸಿ ಹೇಳಿದ್ರು…

ಕ.ರ.ವೇ ತಾಲೂಕಾಧ್ಯಕ್ಷ ಮಂಜುನಾಥ ಗೌಡ ಮಾತನಾಡಿ, ವೇದಿಕೆಯಲ್ಲಿ ಮಾತನಾಡುವುದರಿಂದ ಮಾತ್ರ ಕನ್ನಡ ಬೆಳೆಯುವುದಿಲ್ಲ ಆಚರಣೆಯಲ್ಲಿ ತರಬೇಕು. ತಪ್ಪನ್ನು ಖಂಡಿಸಬೇಕು ಎಂದರು. ಶಂಕರ ಗೌಡ ಹುಡ್ಕಣಿ ಕನ್ನಡ ಹೃದಯದಿಂದ ಬರಬೇಕು. ಭಾಷೆಯ ಅನಿವಾರ್ಯ ಸೃಷ್ಟಿಯಾಗಬೇಕು ಎಂದು ಹೇಳಿದ್ರು..

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಶಿಲ್ಪ ಎಚ್.ಆರ್, ಕರ್ನಾಟಕದಲ್ಲಿ ಶೇಕಡಾ 55ರಷ್ಟು ಜನ ಮಾತ್ರ ಕನ್ನಡ ಮಾತನಾಡ್ತಾರೆ. ಕನ್ನಡಕ್ಕೆ ಮೊದಲ ಆದ್ಯತೆ ನೀಡಿ ದಿನನಿತ್ಯ ಬಳಕೆ ಮಾಡಿದಲ್ಲಿ, ಕನ್ನಡ ಬೆಳೆಯುತ್ತದೆ ಎಂದು ಹೇಳಿದ್ರು. ಕ.ಸಾ.ಪ ತಾಲೂಕಾ ಅಧ್ಯಕ್ಷ ಎಸ್.ಎಚ್.ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ಕಾರ್ತಿಕ ಪರಿಚಯಿಸಿ ಕನ್ನಡದ ಅಭಿವೃದ್ಧಿಗೆ ಸರ್ಕಾರ, ಸಂಘಟನೆ, ಜನರು ಭಾಗಿಗಳಾಗಬೇಕು ಎಂದರು. ಕಸಾಪ ಪದಾಧಿಕಾರಿಗಳಾದ ನಾರಾಯಣ ಹೆಗಡೆ, ಮಹೇಶ್ ಭಂಡಾರಿ, ಜೀನತ್ ಕಣವಿ, ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು…