ಹೊನ್ನಾವರದ ನಂಬರ್‌ 2 ಸ.ಹಿ.ಪ್ರಾ ಶಾಲೆಯಲ್ಲಿ ಬ್ಯಾಗ್‌ ಲೆಸ್‌ ಡೇ ಸಂಭ್ರಮದಲ್ಲಿ ನಲಿದ ಮಕ್ಕಳು


ಹೊನ್ನಾವರ ನಂಬರ್ 2 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಗ್‌ ಲೆಸ್‌ ಡೇ ಸಂಭ್ರಮದ ಅಂಗವಾಗಿ ಸಾಹಿತಿಯೊಳಗಿನ ಪರಿಚಯದ ಮಾಲಿಕೆಯಡಿ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಡಾ.ಎನ್.ಆರ್. ನಾಯಕ ಮಾತನಾಡಿ, ಎಳೆ ಮಕ್ಕಳಿಗೆ ಬಿತ್ತಿದ ಸಾಹಿತ್ಯದ ಬೀಜ ಅವರ ಬದುಕಿನಲ್ಲಿ ಹೊಸ ಹುಟ್ಟಿಗೆ ಕಾರಣವಾಗಬಲ್ಲದು. ಭಾಷೆ, ಸಂಸ್ಕೃತಿ, ಪರಂಪರೆ ಮುಂದಿನ ಪೀಳಿಗೆಗೆ ವರ್ಗಾಯಿಸಲು ಇಂತಹ ಕಾರ್ಯಕ್ರಮ ನೆರವಾಗಬಲ್ಲದು ಎಂದು ಹೇಳಿದ್ರು..
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಚ್. ಎಂ. ಮಾರುತಿ ಮಾತನಾಡಿ, ವಿದ್ಯಾರ್ಥಿಗಳಿಗೆ ನಾಮಾಂಕಿತ ಸಾಹಿತಿಗಳನ್ನು ಪರಿಚಯಿಸುವುದರ ಜೊತೆಗೆ ಅವರ ಕೃತಿಯ ಕುರಿತು ಮಾತನಾಡುವ ಕಾರ್ಯ ತುಂಬಾ ಶ್ಲಾಘನೀಯವಾದದು ಎಂದು ಹೇಳಿದ್ರು.

ಡಾ. ಎನ್.ಆರ್.ನಾಯಕ ಅವರ ಕೃತಿಗಳ ಕುರಿತು ಶಾಲಾ ವಿದ್ಯಾರ್ಥಿಗಳಾದ ಸೌಂದರ್ಯ ಶೇಟ್, ‘ಚಿಕ್ಕಳಬುಡ್ಡಿ ಮಕ್ಕಳ ಗೀತೆಗಳು’ ಮಕ್ಕಳ ಕಾವ್ಯದ ಕುರಿತು ತೇಜಸ್ವಿನಿ ಮೇಸ್ತ, ‘ನಂಬಿಕೆ ಮತ್ತು ನಿಷೇಧ’ ಕೃತಿಯ ಕುರಿತು ಅನ್ವಿತ ಜನಾರ್ಧನ್ ತಾಂಡೇಲ, ‘ದೇವಿ ಹೇಳಿದ ಕಿನ್ನರ ಕಥೆಗಳು’ ಕುರಿತು ಮನೀಶ್ ಗಂಗಾಧರ್ ನಾಯ್ಕ, ‘ಮೂಡಲಿ ಬೆಳಕು’ ಕೃತಿಯ ಕುರಿತು ವರ್ಷ ಮೇಸ್ತ, ‘ಜಾನಪದ ಸಂಬಾರ ಬಟ್ಟಲು’ ಕುರಿತು ಗಾಯತ್ರಿ, ‘ಕನಸು’ ಕವನ ಕೃತಿಯ ಕುರಿತು ನಾಗರಾಜ ಮೇಸ್ತ, ‘ಅಜ್ಜಿ ತೋಟ’ ಕವನದ ಕುರಿತು ಧನ್ಯ ಶೇಟ್ ಮಾತನಾಡಿದ್ರು.

ಇದೇ ಸಂದರ್ಭದಲ್ಲಿ ಮಕ್ಕಳು ಡಾ. ಎನ್.ಆರ್.ನಾಯಕ ರವರು ರಚಿಸಿದ ಅಜ್ಜಿತೋಟ ಕವನವನ್ನು ಅವರಿಗೆ ಅರ್ಪಿಸಿ, ಸನ್ಮಾನಿಸಿದ್ರು. ಶಿಕ್ಷಕ ಪಿ.ಆರ್. ನಾಯ್ಕ, ಎನ್. ಆರ್. ನಾಯಕ ಅವರ ಸಮಗ್ರ ಬದುಕನ್ನು ಪರಿಚಯಿಸಿದ್ರು. ಈ ವೇಳೆ ಎಸ್. ಡಿ. ಎಂ. ಸಿ. ಅಧ್ಯಕ್ಷೆ ನೇತ್ರಾವತಿ ತಾಂಡೇಲ, ಮುಖ್ಯಾಧ್ಯಾಪಕಿ ಲುವೇಜನ್ ಪಿಂಟೋ, ಶಿಕ್ಷಕಿ ಪ್ಲಾವೀಯಾ ಮೆಂಡೋನ್ಸ ಉಪಸ್ಥಿತರಿದ್ದರು.