ಹೊನ್ನಾವರ ತಾಲೂಕಿನ ಕೂಡ್ಲ ಗ್ರಾಮದ ನದಿ ತೀರದಲ್ಲಿ ಬಂದೂಕ್‌ ಸಿನಿಮಾ ಶೂಟಿಂಗ್‌

ಇತ್ತಿಚಿಗೆ ಹೊನ್ನಾವರ ಸಿನಿಮಾ ಶೂಟಿಂಗ್‌ಗೆ ನೆಚ್ಚಿನ ಸ್ಪಾಟ್‌ ಆಗ್ತಿದೆ. ಇಲ್ಲಿನ ಪ್ರಕೃತಿ ಸೌಂದರ್ಯ, ಸಿನಿಮಾ ಮೇಕರ್ಸ್‌ಗಳಿಗೆ ಹಬ್ಬದೂಟ ಬಡಿಸುತ್ತೆ. ಇದೀಗ ಬಂದೂಕ್‌ ಸಿನಿಮಾ ಚಿತ್ರತಂಡ, ಹೊನ್ನಾವರ ತಾಲೂಕಿನ ಕೂಡ್ಲ ಗ್ರಾಮದಲ್ಲಿ ಸಿನಿಮಾ ಚಿತ್ರೀಕರಣ ಮಾಡಿದೆ..

ಕೂಡ್ಲ ಗ್ರಾಮದ ನದಿ ತೀರದಲ್ಲಿ ಎರಡು ಬೋಟ್‌ಗಳಲ್ಲಿ ಆಗಮಿಸಿದ್ದ ಚಿತ್ರತಂಡ, ಹಲವು ಸನ್ನಿವೇಶಗಳ ಶೂಟಿಂಗ್‌ ನಡೆಸಿತು. ಶಂಕರ್‌ ಅಶ್ವಥ್ಥ್‌ ಸೇರಿದಂತೆ ಅನೇಕ ಕಲಾವಿದರು, ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ರು…

ಒಟ್ನಲ್ಲಿ ಬಂದೂಕ್‌ ಚಿತ್ರತಂಡ ಕರಾವಳಿಯ ಅದ್ಭುತ ಪ್ರಕೃತಿ ಸೌಂದರ್ಯದಲ್ಲಿ ಸಿನಿಮಾ ಶೂಟಿಂಗ್‌ ನಡೆಸಿದ್ದು, ಈ ಭಾಗದಲ್ಲಿನ ಚಿತ್ರಪ್ರೇಮಿಗಳ ಕುತೂಹಲ ಹೆಚ್ಚಾಗುವಂತೆ ಮಾಡಿದೆ..