ಕುಮಟಾದ ಕೊಂಕಣ ಸಭಾಭವನದಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್, ವಿಧಾತ್ರಿ ಅಕಾಡೆಮಿ ಹಾಗೂ ರಂಗಸಾರಸ್ವತ ಉತ್ತರ ಕನ್ನಡ ಇದರ ಸಹಯೋಗದಲ್ಲಿ, ನಿವೃತ್ತ ಐ.ಎ.ಎಸ್ ಅಧಿಕಾರಿ ಡಾ.ಡಿ.ವಿ ಗುರುಪ್ರಸಾದ್ ಅವರ ದಿ ಬಿಕನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ್ ಕೃತಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಡಾ.ಡಿ.ವಿ.ಗುರುಪ್ರಸಾದ್, ತನ್ನ ಕುಕೃತ್ಯದ ಮೂಲಕವೇ ಗುರುತಿಸಿಕೊಂಡ ಚಾರ್ಲ್ಸ ಶೋಭರಾಜ ಅವರ ಬಂಧನವಾಗಲು ಕಾರಣ ಉತ್ತರಕನ್ನಡದ ನೆಲ, ಅವರ ಬಂಧನಕ್ಕೆ ಉತ್ತರಕನ್ನಡ ಜಿಲ್ಲೆಯ ಪೊಲೀಸರ ಶ್ರಮ ಹಾಗೂ ತ್ಯಾಗ ಬಹು ಅಮೂಲ್ಯವಾದುದು ಎಂದು ಹೇಳಿದ್ರು.
ಕೃತಿಯನ್ನು ಲೋಕಾರ್ಪಣೆ ಮಾಡಿದ ಮಹಾಬಲ ಮೂರ್ತಿ ಕೊಡ್ಲಕೆರೆ ಮಾತನಾಡಿ ಶೋಭರಾಜ್ ನ ಬದುಕಿನ ಬಗ್ಗೆ ತಾವು ತಿಳಿದ ವಿಚಾರಗಳನ್ನು ತಿಳಿಸುತ್ತಾ, ಮನುಷ್ಯನ ಜೀವನ ಆಕೃತಿ ಆಗಬೇಕು ವಿಕೃತವಾಗಬಾರದು ಎಂದು ಹೇಳಿದ್ರು.
ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಕಾರ್ಯಕ್ರಮದ ಅತಿಥಿಗಳಾದ ಎನ್.ಟಿ ಪ್ರಮೋದರಾವ್ ಮಾತನಾಡಿ ವ್ಯಕ್ತಿ ಶಾಶ್ವತರಲ್ಲ ಆದರೆ ಪುಸ್ತಕಗಳು ಶಾಶ್ವತವಾಗಿ ಉಳಿಯುವಂತದ್ದು. ಪುಸ್ತಕದ ವಿಚಾರಗಳು ಬದುಕಿನಲ್ಲಿ ಕಲಿಯುವಂತಹುದು ಇರುತ್ತದೆ. ಓದು ನಿರಂತರವಾದಾಗ ಬದುಕೂ ಸುಂದರ ಎಂದು ಅಬಿಪ್ರಾಯಪಟ್ಟರು.
ಸಭಾಧ್ಯಕ್ಷತೆ ವಹಿಸಿದ್ದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಗೌರವ ಕಾರ್ಯದರ್ಶಿ ಮುರಳೀಧರ ಪ್ರಭು ಮಾತನಾಡಿ ಡಾ. ಡಿ.ವಿ ಗುರುಪ್ರಸಾದ ಅವರ ವಾರದ ಲೇಖನಗಳನ್ನು ಓದುವುದು ನನ್ನ ಹವ್ಯಾಸ. ಇಂತಹ ಹಿರಿಯ ವ್ಯಕ್ತಿ ನಮ್ಮಲ್ಲಿಗೆ ಬರುವುದು ಸಂತಸದ ವಿಚಾರ ಎಂದು ನಾನೂ ಕಾರ್ಯಕ್ರಮಕ್ಕೆ ಒಪ್ಪಿದೆ. ಛಲವೊಂದಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷ್ಯ ಡಾ. ಗುರುಪ್ರಸಾದ ಎಂದು ಬಣ್ಣಿಸಿದ್ರು..
ಈ ವೇಳೆ ಕಾರ್ಯಕ್ರಮದಲ್ಲಿ, ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ರಂಗ ಸಾರಸ್ವತದ ಸಂಸ್ಥಾಪಕ ಕಾಗಾಲ ಚಿದಾನಂದ ಭಂಡಾರಿ, ಪ್ರಾಂಶುಪಾಲ ಕಿರಣ ಭಟ್ಟ, ಶಿಕ್ಷಕ ಗಣೇಶ ಜೋಶಿ ಉಪಸ್ಥಿತರಿದ್ದರು. ಸರಸ್ವತಿ ಪಿ.ಯು ಕಾಲೇಜಿನ ದ್ವಿತೀಯ ಪಿ.ಯು ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.