ಐಸಿಸಿ ಏಕದಿನ ವಿಶ್ವಕಪ್ 2023 ಅಂತಿಮ ಹಂತ ತಲುಪಿದ್ದು, ಟಿಂ ಇಂಡಿಯಾ ವಿಶ್ವಕಪ್ 2023ರ ಫೈನಲ್ ಪ್ರವೇಶಿಸಿದೆ. ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 70ರನ್‌ಗಳ ಜಯ ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಭಾರತ ಮೂರನೇ ಬಾರಿಗೆ ವಿಶ್ವಕಪ್‌ಗೆ ಮುತ್ತಿಕ್ಕಲು ಸಜ್ಜಾಗಿದೆ. ಭಾನುವಾರ ಅಂದ್ರೆ ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯಕೂ ಮುನ್ನ ಟಾಲಿವುಡ್ ನಟಿ ಮಾಡಿರುವ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು ವೈಜಾಗ್‌ನ ನಟಿ ರೇಖಾ ಬೋಸ್, ಭಾರತ ತಂಡ ಫೈನಲ್ ಗೆದ್ದರೆ ನಾನು ವೈಜಾಗ್ ಬೀಚ್‌ನಲ್ಲಿ ಸ್ಟ್ರೀಯಿಂಗ್ ಮಾಡುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.
ರೇಖಾ ಬೋಸ್ ಸೋಷಿಯಲ್ ಮೀಡಿಯಾದಲ್ಲಿ“ಭಾರತ ವಿಶ್ವಕಪ್ ಗೆದ್ದರೆ ನಾನು ವೈಜಾಗ್ ಬೀಚ್‌ನಲ್ಲಿ ಬೆತ್ತೆಲೆಯಾಗಿ ಸುತ್ತಾಡುತ್ತೇನೆ” ನಮ್ಮ ಭಾರತ ತಂಡಕ್ಕೆ ಆಲ್ ದಿ ಬೆಸ್ಟ್..ಕ್ರಿಕೆಟ್ ವರ್ಲ್ಡ್‌ಕಪ್ 2023 cwc2023 #worldcup2023 cwc23 indiawin cricket kohli” ಎಂದು ಶಿರ್ಷಿಕೆ ನೀಡಿದ್ದಾರೆ.
ಸ್ಟ್ರಿಯಿಂಗ್ ಎಂದರೆ ಬಟ್ಟೆ ಇಲ್ಲದೆ ಬೆತ್ತಲೆಯಾಗಿ ಓಡುವುದು ಎಂದರ್ಥವಾಗಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಇದನ್ನು ನೋಡಿದ ನೆಟ್ಟಿಗರು ಇದೊಂದು ಬಿಟ್ಟಿ ಪ್ರಚಾರದ ಸ್ಟಂಟ್ ಎಂದು ಕಮೆಂಟ್ ಮಾಡ್ತಿದ್ದಾರೆ.. ಯಾವಗಲೂ ವಿವಾದಾತ್ಮಕ ಕಾಮೆಂಟ್‌ಗಳಿಂದ ಸುದ್ದಿಯಾಗುವ ರೇಖಾ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.
12 ವರ್ಷಗಳ ಹಿಂದೆ ಬಾಲಿವುಡ್ ಪೂನಂ ಪಾಂಡೆ ಭಾರತ ವಿಶ್ವಕಪ್ ಗೆದ್ದರೆ ಮುಂಬೈ ಬೀದಿಗಳಲ್ಲಿ ಬೆತ್ತಲೆಯಾಗಿ ತಿರುಗಾಡುತ್ತೇನೆ ಎಂದು ಘೋಷಿಸಿ ಭಾರಿ ಸುದ್ದಿಯಾಗಿತ್ತು. ಇದು ಭಾರಿ ವಿವಾದ ಸೃಷ್ಟಿಸಿ ಆಕೆಯ ವಿರುದ್ದ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಭಾರತ ವಿಶ್ವಕಪ್ ಗೆದ್ದ ಮೇಲೆ ಸೈಲೆಂಟ್ ಆಗಿ ಪೂನಂ ಬಹಳ ಟ್ರೋಲ್ ಆಗಿದ್ರು. ಸಿನಿಮಾಗಳಲ್ಲಿ ಅವಕಾಶ ಸಿಗದ ಕಾರಣ, ಜನಪ್ರಿಯತೆಗಾಗಿ ಈ ರೀತಿ ಸುಳ್ಳು ಹೇಳಬಾರದು ಎಂದು ಕೆಲವರು ಟೀಕೆ ಮಾಡಿದ್ರು..
ರೇಖಾ ಬೊಜ್ ʼಮಾಂಗಲ್ಯಂ, ʼ ಸ್ವಾತಿ ಚಿನುಕು, ʼರಂಗೀಲಾ, ʼಕಾಲಾಯ ತಸ್ಮೈ ನಮಃʼ ಸೇರಿದಂತೆ ತೆಲುಗಿನ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ಯಾವುದೇ ಸಿನಿಮಾ ಹಿಟ್ ಆಗಿಲ್ಲಾ. ಆಕೆಗೆ ಹೆಚ್ಚು ಅವಕಾಶಗಳೂ ಮಾತ್ರ ಸಿಗುತ್ತಿಲ್ಲ. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಹೇಳಿಕೆಗಳಿಂದ ಬಿಟ್ಟಿ ಪ್ರಚಾರ ಗಿಟ್ಟಿಸುವ ಕೆಲಸಕ್ಕೆ ಇಳಿದಿದ್ದಾರೆ…