ಕುಮಟಾ ತಾಲೂಕಿನ ಬಾಡ ವಲಯದ ವತಿಯಿಂದ ತೆಪ್ಪದ ಸರ್ಕಾರಿ ಹಿ. ಪ್ರಾ. ಶಾಲೆಯ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸತ್ಯನಾರಾಯಣ ಪೂಜೆಯಲ್ಲಿ ಶಾಸಕ ದಿನಕರ ಶೆಟ್ಟಿ ಪಾಲ್ಗೊಂಡು, ಕಾರ್ಯಕ್ರಮವನ್ನು ಉದ್ಘಾಟಿಸಿದ್ರು.
ಬಳಿಕ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನೆರವೇರಿದಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಇನ್ಯಾವುದೇ ಸಂಘ ಸಂಸ್ಥೆಗಳಿಂದ ನಡೆಸಲು ಸಾಧ್ಯವಿಲ್ಲ ಎಂದರೆ ತಪ್ಪಾಗಲಾರದು. ನಮ್ಮ ಧರ್ಮ ಹಾಗೂ ಸಂಸ್ಕೃತಿಯ ರಕ್ಷಣೆ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಧರ್ಮಾಧಿಕಾರಿ ಡಾ|| ವೀರೇಂದ್ರ ಹೆಗ್ಗಡೆ ಅವರು ನಿರ್ವಹಿಸುತ್ತಾ ಬಂದಿದ್ದಾರೆ ಎಂದು ಹೇಳಿದ್ರು..
ಹೊಲನಗದ್ದೆ ಗ್ರಾ. ಪಂ. ಅಧ್ಯಕ್ಷ ಎಮ್. ಎಮ್. ಹೆಗಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ತಾಲೂಕು ಯೋಜನಾಧಿಕಾರಿ ಕಲ್ಮೇಶ ಎಮ್., ಕಾಗಲ್ ಹಾಗೂ ಬಾಡ ಗ್ರಾ. ಪಂ. ಅಧ್ಯಕ್ಷರುಗಳಾದ ಸಾವಿತ್ರಿ ಪಟಗಾರ ಹಾಗೂ ಗೀತಾ ನಾಯ್ಕ್, ಗ್ರಾ. ಪಂ. ಉಪಾಧ್ಯಕ್ಷ ಮಹಾಂತೇಶ್ ಹರಿಕಂತ್ರ, ಗ್ರಾ. ಪಂ. ಸದಸ್ಯರುಗಳಾದ ಲಕ್ಷ್ಮಿ ಪಟಗಾರ, ಗಂಗಾ ಪಟಗಾರ, ದತ್ತಾತ್ರೇಯ ಪಟಗಾರ, ಅನ್ನಪೂರ್ಣ ನಾಯ್ಕ್, ಶ್ರೀಕಾಂತ ಮಡಿವಾಳ, ಬಾಡ ವಲಯದ ಜನಜಾಗೃತಿ ಸದಸ್ಯೆ ಮಮತಾ ನಾಯ್ಕ, ಉದ್ದಿಮೆದಾರ ಮೋಹನ ಪಟಗಾರ, ಪೂಜಾ ಸಮಿತಿ ಅಧ್ಯಕ್ಷ ಗೋವಿಂದ ಪಟಗಾರ ಮೊದಲಾದವರು ಉಪಸ್ಥಿತರಿದ್ದರು.