ದಾಂಡೇಲಿ :- ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಹತ್ತಿರವಿರುವ ಕಾಳಿನದಿಯ ತಟದಲ್ಲಿ ಗುರುವಾರ ನಗರ ಸಭೆಯ ಸದಸ್ಯರ ಸೂಚನೆಯಂತೆ ನಗರಸಭೆ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..
ಕಳೇದ ಒಂದು ವಾರದಿಂದ ಕಾಳಿ ನದಿ ನೀರು ಹರಿವಿನ ಪ್ರಮಾಣ ಕಡಿಮೆಯಾಗಿದ್ದು, ನದಿಯ ದಡದಲ್ಲಿ ಅಸ್ವಚ್ಚತೆ ನಿರ್ಮಾಣವಾಗಿತ್ತು. ನದಿಗೆ ಪೂಜೆಗೆ ಅಥವಾ ವಿಕ್ಷಣೆಗೆ ಬರುವ ಸಾರ್ವಜನಿಕರಿಗೆ ತ್ಯಾಜ್ಯ ವಸ್ತುಗಳು ಸ್ವಾಗತ ಕೋರುವಂತ ಹಾಗೂ ಕೊಳೆತ ತ್ಯಾಜ್ಯ ವಸ್ತುಗಳ ದುರ್ನಾತದಿಂದ ಸಾರ್ವಜನಿಕರು ಮೂಗು ಮುಚ್ಚಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು..
ಇನ್ನೂ ಇದೇ ನ.19 ರಂದು ಉತ್ತರ ಭಾರತೀಯ ಸಮಾಜದ ಚೆಟ್‌ಪೂಜಾ ವಿಶೇಷ ಕಾರ್ಯಕ್ರಮ ಇದೇ ನದಿಯ ತಟದಲ್ಲೇ ಇರುವ ಹಿನ್ನೆಲೆಯಲ್ಲಿ ಈ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೀಪಾವಳಿ ಹಬ್ಬದಂದು ಮಾಡಲಾದ ಪೂಜಾ ಸಾಮಗ್ರಿಗಳನ್ನು ನದಿಗೆ ಬಿಡುವ ಪದ್ದತಿಯಿದ್ದು, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ನದಿಗೆ ಎಸೆದಿದ್ದರಿಂದ ಅಲ್ಲಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯೇ ತುಂಬಿದಂತಾಗಿದೆ…
…
ಈ ವೇಳೆ ಉತ್ತರ ಭಾರತೀಯ ಸಮಾಜದ ಸದಸ್ಯರು ನದಿಯನ್ನು ಸ್ಚಚ್ಚವಾಗಿಟ್ಟುಕೊಳ್ಳುವಂತೆ ಮನವಿ ಮಾಡಿದ್ರು. ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಉತ್ತರ ಭಾರತೀಯ ಸಮಾಜದ ಸದಸ್ಯರು, ಪೌರಕಾರ್ಮಿಕರು ಹಾಗೂ ನಗರ ಸಭೆಯ ಸಿಬ್ಬಂದಿಗಳು ಭಾಗಿಯಾಗಿದ್ರು…