ಭಾರತ-ನೇಪಾಳ ಗಡಿಯಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ವಶಕ್ಕೆ ಪಡೆದ ಎಸ್‌ಎಸ್‌ಬಿ

ದೆಹಲಿ ನವೆಂಬರ್ 16: ಬುಧವಾರ ಸಂಜೆ ಬಿಹಾರದ ಕಿಶನ್‌ಗಂಜ್‌ನಲ್ಲಿರುವ ಭಾರತ-ನೇಪಾಳ ಗಡಿಯ ಮೂಲಕ ಭಾರತದ ಭೂಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಮಗ ಸೇರಿದಂತೆ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಸಶಸ್ತ್ರ ಸೀಮಾ ಬಲ್ ಬಂಧಿಸಿದೆ. ಪ್ರಾಥಮಿಕ ತನಿಖೆಯ ನಂತರ, ಹೆಚ್ಚಿನ ತನಿಖೆಗಾಗಿ ಎಸ್‌ಎಸ್‌ಬಿ ಇಬ್ಬರನ್ನು ಕಿಶನ್‌ಗಂಜ್ ಪೊಲೀಸರಿಗೆ ಹಸ್ತಾಂತರಿಸಿದರು.

ಪಾನಿ ಟ್ಯಾಂಕಿ ಬಿಒಪಿ (ಬಾರ್ಡರ್ ಔಟ್‌ಪೋಸ್ಟ್) ನಲ್ಲಿ ದಿನನಿತ್ಯದ ತಪಾಸಣೆಯ ಸಮಯದಲ್ಲಿ, ಎಸ್‌ಎಸ್‌ಬಿ ಸಿಬ್ಬಂದಿ ಮಹಿಳೆ ಮತ್ತು ಆಕೆಯ ಮಗನನ್ನು ತಡೆದು ದಾಖಲೆಗಳನ್ನು ಕೇಳಿದರು. ಅವರು ದಾಖಲೆಗಳನ್ನು ನೀಡಲು ವಿಫಲರಾದರು. ಅವರನ್ನು ಪರೀಕ್ಷಿಸಿದಾಗ ಅವರು ಪಾಕಿಸ್ತಾನದ ಪ್ರಜೆಗಳು ಎಂದು ತಿಳಿದುಬಂದಿದೆ.

ಬಂಧಿತರನ್ನು ಪಾಕಿಸ್ತಾನದ ಸರಾಫಾ ಮಾರ್ಕೆಟ್ ಕರಾಚಿಯ ಗಹನ್ಮಾರ್ ಸ್ಟ್ರೀಟ್ ನಿವಾಸಿಗಳು ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯ ನಂತರ ನಾವು ಇಬ್ಬರನ್ನು ಕಿಶನ್‌ಗಂಜ್ ಪೊಲೀಸರಿಗೆ ಹಸ್ತಾಂತರಿಸಿದ್ದೇವೆ ಎಂದು ಹೆಸರು ಹೇಳಲು ಬಯಸದ ಎಸ್‌ಎಸ್‌ಬಿ ಅಧಿಕಾರಿಗಳು ಹೇಳಿದ್ದಾರೆ. ಅವರು ನೇಪಾಳದಿಂದ ಬರುತ್ತಿದ್ದರು ಮತ್ತು ನಾವು ಅವರನ್ನು ತಡೆದು ದಾಖಲೆಗಳನ್ನು ಕೇಳಿದ್ದೇವೆ. ನಾವು ಅವರನ್ನು ಬಂಧಿಸಿದ್ದೇವೆ ಎಂದಿದ್ದಾರೆ ಅವರು.

ಪಾಕಿಸ್ತಾನದ ಪ್ರಜೆಗಳ ವಿಚಾರಣೆ ನಡೆಯುತ್ತಿದೆ. ಅವರು ಭಾರತಕ್ಕೆ ಪ್ರವೇಶಿಸಲು ಸಂಬಂಧಿಸಿದಂತೆ ಅವರ ನಿಜವಾದ ಉದ್ದೇಶವನ್ನು ನಾವು ಕಂಡುಕೊಂಡಿಲ್ಲ” ಎಂದು ಕಿಶನ್‌ಗಂಜ್‌ನ ಗಲ್ಗಾಲಿಯಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರಾಹುಲ್ ಕುಮಾರ್ ಹೇಳಿದ್ದಾರೆ.