ಬನವಾಸಿಯಲ್ಲಿ ರಾಜ್ಯ ಮಟ್ಟದ ಹೋರಿ ಬೆದರಿಸುವ ಹಬ್ಬ – ಗಮನ ಸೆಳೆದ ಅಲಂಕೃತಗೊಂಡ ವಿವಿಧ ಹೋರಿಗಳು.


ಶಿರಸಿ ತಾಲೂಕಿನ ಬನವಾಸಿಯ ಮಧುರವಳ್ಳಿಯಲ್ಲಿ ಮಾರಿಕಾಂಬಾ ಸೇವಾ ಸಮಿತಿ ಹಾಗೂ ರಾಮೇಶ್ವರ ಯುವಕ ಸಂಘದ ಆಶ್ರಯದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಹೋರಿ ಬೆದರಿಸುವ ಹಬ್ಬ ನೋಡುಗರನ್ನುಗಮನ ಸೆಳೆಯಿತು.

ಈಹೋರಿ ಬೆದರಿಸುವ ಹಬ್ಬದಲ್ಲಿ 200ಕ್ಕಿಂತ ಹೆಚ್ಚು ಹೋರಿಗಳು ಭಾಗವಹಿಸಿದ್ವು. ಬೇರೆ, ಬೇರೆ ಊರುಗಳಿಂದ ರೈತರು ತಮ್ಮ ಹೋರಿಗಳೊಂದಿಗೆ ಆಗಮಿಸಿ, ಹಬ್ಬದಲ್ಲಿ ಪಾಲ್ಗೊಂಡು ಹಬ್ಬಕ್ಕೆ ವಿಶೇಷ ಮೆರುಗು ತಂದರು.

ಹಬ್ಬಕ್ಕೆಂದು ತಂದ ಹೋರಿಗಳನ್ನು ವೈಭವಯುತವಾಗಿ ಅಲಂಕರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು. ಮಾಲೀಕರು ತಮ್ಮ ಹೋರಿಗಳಿಗೆ ಒಣ ಕೊಬ್ಬರಿ ಮಾಲೆಯನ್ನು ಹಾಕಿ, ಏಳೆಂಟು ಜನರು ಸೇರಿ ಹಗ್ಗದ ಸಹಾಯದಿಂದ ಹೋರಿಗಳನ್ನು ಅಖಾಡಕ್ಕೆ ಬಿಡುತ್ತಿದ್ದರು. ಕೊಬ್ಬರಿ ಮಾಲೆಯನ್ನು ಹರಿಯಲು ಬರುವ ಫೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಪ್ರೇಕ್ಷಕರ ನಡುವೆ ಓಡುತ್ತಾ ಹೋಗಿ ಗುರಿ ಮುಟ್ಟುವುದನ್ನು ನೋಡಿ ನೆರೆದ ಪ್ರೇಕ್ಷಕರು ಶಿಳ್ಳೆ ಕೇಕೆ ಚಪ್ಪಾಳೆ ಹಾಕಿ ಸಂಭ್ರಮಿಸಿದ್ರು…

ಹೋರಿ ಹಿಡಿಯುವ ವೇಳೆ ಕೆಲವು ಫೈಲ್ವಾನರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಬಿಟ್ಟರೆ, ಹಬ್ಬ ಬಹುತೇಕ ಶಾಂತಿಯುತವಾಗಿ ಜರುಗಿತು. ಸಂಜೆ ವಿಜೇತ ಹೋರಿಗಳಿಗೆ ಬಹುಮಾನ ವಿತರಿಸಲಾಯ್ತು.