ಹೊನ್ನಾವರ ತಾಲೂಕಿನ ತೊಳಸಾಣಿ ಗ್ರಾಮದಲ್ಲಿ ದೀಪಾವಳಿಯ ಸಂಭ್ರಮ-ಬಲಿಪಾಡ್ಯಮಿಯ ಗೋಪೂಜೆಯನ್ನು ವಿಶಿಷ್ಟವಾಗಿ ಆಚರಿಸಿದ ಗ್ರಾಮಸ್ಥರು……


ಹೊನ್ನಾವರ ತಾಲೂಕಿನ ತೊಳಸಾಣಿ ಗ್ರಾಮದಲ್ಲಿ ದೀಪಾವಳಿಯ ಸಂಭ್ರಮದಲ್ಲಿ ಬಲಿಪಾಡ್ಯಮಿಯ ದಿನದಂದು ಆಚರಿಸಲಾಗುವ ಗೋಪೂಜೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯ್ತು…


ಒಂದೆಡೆ ಮಧುವಣಗಿತ್ತಿಯಂತೆ ಶೃಂಗರಿಸಿ ಹೋರಿಗಳನ್ನು ಒಡಿಸ್ತಿರೊ ಜನತೆ. ಇನ್ನೊಂದೆಡೆ ಪಟಾಕಿ, ದೀವಟಿಗೆ ಸದ್ದಿಗೆ ಕಕ್ಕಾಬಿಕ್ಕಿಯಾಗಿ ಓಡುತ್ತಿರೋ ಹೋರಿಗಳು ಈ ದೃಶ್ಯ ಕಂಡು ಬಂದಿದ್ದು ಹೊನ್ನಾವರ ತಾಲೂಕಿನ ತೊಳಸಾಣಿ ಗ್ರಾಮದಲ್ಲಿ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೋಪೂಜೆ ಪ್ರಯುಕ್ತ ಗ್ರಾಮ ದೇವತೆಯಾದ ಆದಿಶಕ್ತಿ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ಎಲ್ಲಾ ಹೋರಿಗಳನ್ನುಶೃಂಗರಿಸಿ ಓಡಿಸುವ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ಜರುಗಿತು..

ಊರಿನ ಪರ ಊರಿನ ನಾಗರಿಕರು ಈ ವೇಳೆ ಸಂಭ್ರಮದಿಂದ ಭಾಗವಹಿಸಿದ್ರು. ಬಹಳ ವರ್ಷಗಳಿಂದ ಈ ಊರಿನಲ್ಲಿ ನೆಲೆಸಿರುವ ಕುಂಬ್ರಿ ಮರಾಠಿ ಸಮುದಾಯದ ಜನರು ಈ ಸಂಪ್ರದಾಯವನ್ನು ಭಕ್ತಿ ಗೌರವದಿಂದ ಗೋವುಗಳನ್ನು ಪೂಜಿಸಿ ಸ್ಥಳೀಯ ದೈವಗಳನ್ನು ಆರಾಧಿಸಿ ಆದಿಶಕ್ತಿಯ ಸನ್ನಿಧಿಯಲ್ಲಿ ಈಡುಗಾಯಿ ಒಡೆದ ನಂತರ ಹೋರಿಗಳನ್ನು ಓಡಿಸಿ ಸಂಭ್ರಮಿಸ್ತಾರೆ. ಆಧುನಿಕ ಯುಗದ ಭರಾಟೆಯಲ್ಲಿಯೂ ಗ್ರಾಮೀಣ ಭಾಗದಲ್ಲಿ ತಲತಲಾಂತರಗಳಿಂದ ಬಂದ ಸಂಪ್ರದಾಯಗಳು ಯಥಾವತ್ತಾಗಿ ಮುಂದುವರೆದುಕೊಂಡು ಬಂದಿದೆ. ಹಿರಿಯರ ಮಾರ್ಗದರ್ಶನದಲ್ಲಿ ಯುವ ಸಮೂಹವು ಸಂಪ್ರದಾಯಬದ್ಧವಾಗಿ ಹಬ್ಬಗಳನ್ನು ಅಬ್ಬರದಿಂದಲೆ ಆಚರಿಸಿದ್ರು..