ಕಾರವಾರದಲ್ಲಿ ಆಟೋ ಚಾಲಕ-ಮಾಲಕರ ಸಂಘದಿಂದ ಕನ್ನಡ ರಾಜ್ಯೋತ್ಸವ -ಧ್ವಜಾರೋಹಣ ನೆರವೇರಿಸಿದ ಮಾಜಿ ಶಾಸಕಿ ರೂಪಾಲಿ ನಾಯ್ಕ

ಕಾರವಾರದ ಸುಭಾಷ್‌ ಸರ್ಕಲ್‌ ಆಟೋ ನಿಲ್ದಾಣದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಹಾಗೂ ಉ.ಕ ಜಿಲ್ಲಾ ಆಟೋ ಚಾಲಕ-ಮಾಲಕರ ಸಂಘದಿಂದ 68ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯ್ತು. ಕಾರವಾರ-ಅಂಕೋಲಾ ಮಾಜಿ ಶಾಸಕಿ ರೂಪಾಲಿ ನಾಯ್ಕ ಧ್ವಜಾರೋಹಣ ನೆರವೇರಿಸಿದ್ರು ಕಾರವಾರದ ಸುಭಾಷ್‌ ಸರ್ಕಲ್‌ ಆಟೋ ನಿಲ್ದಾಣದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಹಾಗೂ ಉ.ಕ ಜಿಲ್ಲಾ ಆಟೋ ಚಾಲಕ-ಮಾಲಕರ ಸಂಘದಿಂದ 68ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯ್ತು. ಕಾರವಾರ-ಅಂಕೋಲಾ ಮಾಜಿ ಶಾಸಕಿ ರೂಪಾಲಿ ನಾಯ್ಕ ಧ್ವಜಾರೋಹಣ ನೆರವೇರಿಸಿದ್ರು…

ರಾಜ್ಯೋತ್ಸವದ ಶುಭಾಶಯ ಕೋರಿ ಮಾತನಾಡಿದ ರೂಪಾಲಿ ನಾಯ್ಕ, ವಿಶಾಲ ಮೈಸೂರು ರಾಜ್ಯವು ಕರ್ನಾಟಕವಾಗಿ ಮರುನಾಮಕರಣಗೊಂಡು ಇಂದಿಗೆ 50 ವರ್ಷಗಳು ಕಳೆದಿವೆ. ನಮ್ಮ ರಾಜ್ಯ ನಮ್ಮ ಅಸ್ಮಿತೆ, ಕರ್ನಾಟಕ ರಾಜ್ಯದ ನೆಲ, ಜಲ ಮತ್ತು ಸಂಸ್ಕೃತಿಯ ರಕ್ಷಣೆಗೆ ನಾವೆಲ್ಲರೂ ಬದ್ಧರಾಗಬೇಕು. ಕರ್ನಾಟಕ ವಿಶಿಷ್ಟವಾದ ಭೌಗೋಳಿಕ ಪರಿಸರ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ರಾಜ್ಯ. ರಾಜ್ಯದ ಮೇಲಿನ ಅಭಿಮಾನ ಕೇವಲ ದಿನಾಚರಣೆಗೆ ಮಾತ್ರ ಸೀಮಿತವಾಗಬಾರ್ದು ನಿತ್ಯವೂ ಕನ್ನಡದ ಆರಾಧನೆ ಆಗಬೇಕು ಎಂದು ಹೇಳಿದ್ರು ಕಾರವಾರ ನಗರದ ಬಸ್ ನಿಲ್ದಾಣದ ಎದುರಿನಲ್ಲಿ ಪ್ರತಿ ವರ್ಷದಂತೆ ನಡೆದ ಈ ವರ್ಷದ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಎಸ್ಸಿ- ಎಸ್ಟಿ ಮೋರ್ಚಾದ ಅಧ್ಯಕ್ಷ ಉದಯ ಬಶೆಟ್ಟಿ ಧ್ವಜಾರೋಹಣ ನೆರವೇರಿಸಿದ್ರು…

ಈ ವೇಳೆ ಜಿಲ್ಲಾ ಆಟೋ ಚಾಲಕ ಮಾಲಕರ ಸಂಘದ ಜಿಲ್ಲಾಧ್ಯಕ್ಷ ದಿಲೀಪ್ ಜಿ ಅರ್ಗೇಕರ್, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ್ ಗುನಗಿ, ರೋಷನ್ ಹರಿಕಂತ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ಗೌಡ, ಮೋಹನ್ ಉಳ್ವೇಕರ ಸಂತೋಷ್ ಗುನಗಿ, ರೋಶನ್ ತಾಂಡೇಲ್, ಕಾರ್ಯಕರ್ತರು ಹಾಗೂ ಆಟೋ ಚಾಲಕರು ಇತರರು ಉಪಸ್ಥಿತರಿದ್ರು..