ಕಾರವಾರ : ಬಿಜೆಪಿ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ ಅವರು, ಹಿಂದೂ ಪರ ಹೋರಾಟಗಾರ ಇತ್ತೀಚಿಗೆ ಮೃತರಾದ ಕಾರವಾರ ತಾಲೂಕಿನ ಶಿರವಾಡ ಗ್ರಾಮದ ಮಾರುತಿ ನಾಯ್ಕ ಮನೆಗೆ ಭೇಟಿಕೊಟ್ಟು ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ರು. ಮಾರುತಿ ನಾಯ್ಕ ಹಿಂದುತ್ವವನ್ನು ನಂಬಿ, ಧರ್ಮದ ಬಗ್ಗೆ ಅಭಿಮಾನ ಹೊಂದಿ ಕೊನೆವರೆಗೂ ಹೋರಾಟ ಮಾಡಿದವರು. ಅವರು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡುವವರೆಗೆ ಧೃಡ ನಿರ್ಧಾರ ತೆಗೆದು ಕೊಳ್ಳುತ್ತಾರೆ ಎಂದ್ರೆ, ಅವರಿಗೆ ಯಾವ ರೀತಿ ಆರೋಪಿಗಳು ಹಾಗು ಪೊಲೀಸರು ಹಿಂಸೆ ನೀಡಿರಬಹುದು ಎಂದು ಊಹಿಸಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ನಾವೆಲ್ಲರೂ, ನಮ್ಮ ಪಕ್ಷ ಈ ದುಃಖದ ಸಮಯದಲ್ಲಿ ಮಾರುತಿ ನಾಯ್ಕ ಕುಟುಂಬದವರೊಂದಿಗೆ ಜೊತೆಗೆ ಸದಾ ಇದ್ದು ನಿಮ್ಮ ಕಷ್ಟ ಸುಃಖಗಳಲ್ಲಿ ಭಾಗಿಯಾಗುತ್ತೇವೆ. ಹಾಗು ದೇವರು ನಿಮ್ಮ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಮೃತರ ಪತ್ನಿಗೆ ಸಾಂತ್ವನ ಹೇಳಿದ್ರು.
ಬಳಿಕ ಜಿಲ್ಲಾಧ್ಯಕ್ಷರು ಬಿಜೆಪಿ ಪದಾಧಿಕಾರಿಗಳೊಂದಿಗೆ ಸೇರಿ, ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್ ಅವರನ್ನು ಭೇಟಿಯಾಗಿ ತಪ್ಪಿತಸ್ಥರು ಯಾರೇ ಆಗಿರಲಿ, ನಿರ್ಧಾಕ್ಷಿಣವಾಗಿ ಕಾನೂನಿನ ಕ್ರಮ ಕೈಗೊಂಡು ಶಿಕ್ಷೆ ವಿಧಿಸಬೇಕು. ಹಾಗೆಯೇ ಮೃತರ ಪತ್ನಿ ಹಾಗೂ ಚಿಕ್ಕ ಮಕ್ಕಳಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದ್ರು.
ಜಿಲ್ಲಾಧ್ಯಕ್ಷರ ಜೊತೆಯಲ್ಲಿ ಬಿಜೆಪಿ ಗ್ರಾಮೀಣ ಪ್ರಭಾರಿ ಗಜಾನನ ಗುನಗಾ, ಶಿರವಾಡ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ನಾಯ್ಕ, ಉಪಾಧ್ಯಕ್ಷರಾದ ದಿಲೀಪ ನಾಯ್ಕ, ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಉದಯ ಬಸಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸೂರ್ಯ ಪ್ರಕಾಶ್, ಬಿಜೆಪಿ ನಗರ ಅಧ್ಯಕ್ಷ ನಾಗೇಶ್ ಕುರ್ಡೇಕರ, ಮನೋಜ್ ಭಟ್, ರಾಜೇಶ ನಾಯ್ಕ ಸಿದ್ದರ, ಗ್ರಾಮೀಣ ಕಾರ್ಯದರ್ಶಿ ಸುಜಾತಾ ಬಾಂದೇಕರ್, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಉದಯ ನಾಯ್ಕ, ಶಕ್ತಿ ಕೇಂದ್ರದ ಪ್ರಮುಖ ಉಮೇಶ ಗೌಡ, ಗ್ರಾಮೀಣ ಕಾರ್ಯದರ್ಶಿ ಸತೀಶ ತಳೇಕರ, ಬಿಜೆಪಿ ಸಾಮಾಜಿಕ ಜಾಲತಾಣದ ಅಧ್ಯಕ್ಷ ಕಿಶನ್ ಕಾಂಬ್ಳೆ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು…