ಯಲ್ಲಾಪುರ :- ತಾಲೂಕಿನ ಕಿರವತ್ತಿಯಲ್ಲಿ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಹೆಣ್ಣುಮಗುವಿನ ದಿನಾಚರಣೆ ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀಬಾಯಿ ಪಾಟೀಲ್ ಉದ್ಘಾಟಿಸಿದ್ರು. ನಂತರ ಮಾತನಾಡಿದ ಅವರು ಹೆಣ್ಣು, ಪುರುಷರಿಗೆ ಸಮಾನವಾಗಿ ಸಾಧನೆ ಮಾಡುತ್ತಿದ್ದಾಳೆ. ಹೆಣ್ಣುಮಕ್ಕಳ ಹಿತರಕ್ಷಣೆ ಮಾಡುವ ಕಾನೂನುಗಳಿದ್ದು, ಅದನ್ನು ಬಳಸಿಕೊಂಡು ಸಬಲರಾಗಬೇಕು ಎಂದು ಹೇಳಿದ್ರು..
ಬಳಿಕ ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಜಿ. ಭಟ್ಟ ಹೆಣ್ಣುಮಕ್ಕಳ ರಕ್ಷಣೆಗಾಗಿ ಇರುವ ಕಾಯಿದೆಗಳ ಕುರಿತು ಮಾಹಿತಿ ನೀಡಿದ್ರು. ನ್ಯಾಯವಾದಿ ಎನ್. ಟಿ. ಗಾಂವ್ಕರ ಬಾಲ್ಯವಿವಾಹ ನಿಷೇಧ ಕಾಯಿದೆ ಕುರಿತು ಉಪನ್ಯಾಸ ನೀಡಿದ್ರು.
ಈ ವೇಳೆ ಕಾರ್ಯಕ್ರಮದಲ್ಲಿ ತಹಸೀಲ್ದಾರ ಎಂ. ಗುರುರಾಜ, ಸಹಾಯಕ ಸರ್ಕಾರಿ ಅಭಿಯೋಜಕಿ ಜೀನತ್ ಬಾನು ಶೇಖ್, ಸಿಡಿಪಿಒ ರಫೀಕಾ ಹಳ್ಳೂರು, ಶಿಕ್ಷಣ ಸಂಯೋಜಕ ಪ್ರಶಾಂತ ಹೆಗಡೆ, ಪೊಲೀಸ್ ಇಲಾಖೆಯ ಶ್ಯಾಮ್ ಪಾವಸ್ಕರ, ಶಿಕ್ಷಕರಾದ ಅಜಯ್ ನಾಯಕ, ನಾರಾಯಣ ಕಾಂಬಳೆ, ತಾ.ಪಂ. ನ ಸಹಾಯಕ ನಿರ್ದೇಶ ಮಂಜುನಾಥ ಆಗೇರ ಹಾಗೂ ಕೆ.ಪಿ.ಎಸ್. ಪ್ರೌಢಶಾಲೆಯ ಮುಖ್ಯಾಧ್ಯಾಪಕ ಜನಾರ್ದನ ಗಾಂವ್ಕರ, ಪ್ಯಾರಾಲೀಗಲ್ ವಾಲಂಟಿಯರ್ ಸುಧಾಕರ ನಾಯಕ ಉಪಸ್ಥಿತರಿದ್ರು.
ಶ್ರೀಧರ ಅಣಲಗಾರ, ನುಡಿಸಿರಿ ನ್ಯೂಸ್, ಯಲ್ಲಾಪುರ