ಕಾರವಾರ : ದೇಶಕ್ಕೋಸ್ಕರ, ಮೋದಿಜೀಗೋಸ್ಕರ ನಾವೆಲ್ಲ ಒಂದಾಗಬೇಕು. ಅನಂತ ಕುಮಾರ ಹೆಗಡೆ ಅವರೇ ನಮ್ಮ ಸಂಸದರು ಅವರೇ ನಮ್ಮ ಸಂಸದರಾಗಲಿ. 2024 ರಲ್ಲಿ ಮೋದಿಜೀ ಪ್ರಧಾನಿಯಾಗಬೇಕು ನಾವೆಲ್ಲ ಒಂದಾಗಿ ದೇಶಕ್ಕಾಗಿ ದೇಶದ ಉನ್ನತಿಗಾಗಿ ಭಾರತದ ಹೆಮ್ಮೆಯ ಪುತ್ರ ವಿಶ್ವ ನಾಯಕ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಪಣ ತೋಡೋಣ ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಕರೆ ನೀಡಿದ್ದಾರೆ…
ಕಾರವಾರದಲ್ಲಿ ತಮ್ಮ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಾರ್ಟಿ ಕಾರ್ಯಕಾರಣಿ ಸಭೆಯನ್ನ ಉದ್ದೇಶಿಸಿ ರೂಪಾಲಿ ನಾಯ್ಕ ಮಾತನಾಡಿದ್ರು. ಮೊದಲಿಗೆ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀಮತಿ ರೂಪಾಲಿ ನಾಯ್ಕ ಅವರು, ಮೋದಿಜೀ ದೇವತಾಮಾನವ. ಮೋದಿಜೀ ಸರ್ಕಾರ ವಿವಿಧ ಉನ್ನತ ಪರಿಣಾಮದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಮೋದಿಜಿಯವರ ಉಜ್ವಲ ಸ್ವಚ್ಛ ಭಾರತ್, ಕಿಸಾನ್ ಸಮ್ಮಾನ್ ನಿಧಿ ,ಆಯುಷ್ಮಾನ್ ಭಾರತ್ ಮುಂತಾದ ಅನೇಕ ಕಾರ್ಯಕ್ರಮಗಳು, ಸಬ್ ಕಾ ಸಾತ್ ಸಬ್ ಕಾ ವಿಕಾಸ್ ದೃಷ್ಟಿಯ ಅನುಷ್ಠಾನವನ್ನು ಪ್ರತಿಬಿಂಬಿಸುತ್ತದೆ. ಮೋದಿಜೀ ಆಡಳಿತದಲ್ಲಿ ಬಡವರನ್ನು ಭಾರತದ ಬೆಳವಣಿಗೆಯಲ್ಲಿ ಪಾಲುದಾರರೆಂದು ಪರಿಗಣಿಸಲಾಗಿದೆ…
ರಾಷ್ಟ್ರೀಯ ಭದ್ರತೆಯಾಗಲಿ, ದೇವಸ್ಥಾನಗಳ ಪುನರನಿರ್ಮಾಣ, ಸರ್ಜಿಕಲ್ ಸ್ಟ್ರೈಕ್, ಚಂದ್ರಯಾನ, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು, ಹೀಗೆ ಮೋದಿಜೀ ಆಡಳಿತದಲ್ಲಿ ವಿವಿಧ ಉನ್ನತ ಪರಿಣಾಮದ ನಿರ್ಧಾರಗಳನ್ನು ತೆಗೆದುಕೊಂಡ ಪರಿಣಾಮ, ಭಾರತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಮೋದಿಜೀ ಆಡಳಿತದಲ್ಲಿ ಹೊಸ ಭಾರತ ಬಲಿಷ್ಠ ಭಾರತ ಸಮೃದ್ಧ ಮತ್ತು ಸ್ವಾವಲಂಬಿ ಭಾರತವಾಗಿದೆ ಎಂದು ಹೇಳಿದ್ರು…
ಈ ಕಾರ್ಯಕ್ರಮದಲ್ಲಿ ಅಗಲಿದ ಬಿಜೆಪಿ ಕಾರ್ಯಕರ್ತ ನಿತಿನ್ ರಾಯ್ಕರ್ ನೆನೆದ ರೂಪಾಲಿ ನಾಯ್ಕ ಅವರು, ನಿತಿನ್ ಅಗಲಿಕೆ ಕಾರವಾರ ಅಂಕೋಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ನಮ್ಮ ಎಲ್ಲಾ ಕಾರ್ಯಕರ್ತರು ಪಕ್ಷಕ್ಕೋಸ್ಕರ ಹಗಲು ಇರುಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ರು… ಬಿಜೆಪಿ ಕಾರವಾರ ನಗರ ಮಂಡಲ ಅಧ್ಯಕ್ಷರಾದ ನಾಗೇಶ ಕುರ್ಡೇಕರ ನೇತೃತ್ವದಲ್ಲಿ ಕಾರ್ಯಕರ್ತರಿಂದ ಹಣ ಸಂಗ್ರಹಣೆ ಮಾಡಲಾಗಿತ್ತು. ಮಾಜಿ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ ಅವರು ಈ ಕಾರ್ಯಕ್ಕೆ ಕೈ ಜೋಡಿಸಿದರು. ಸಂಗ್ರಹಿಸಿದ ಹಣವನ್ನು ನಿತಿನ್ ರಾಯ್ಕರ್ ಅವರ ಪತ್ನಿ ನಿಕಿತಾ ರಾಯ್ಕರ ಅವರಿಗೆ ಹಸ್ತಾಂತರಿಸಲಾಯಿತು…