ನನ್ನ ತಮ್ಮನನ್ನ ಸರ್ವನಾಶ ಮಾಡಿ ಸಾಯಿಸಿದ್ದೆ ಶಹರ ಠಾಣೆ ಪಿಎಸ್ಐ- ಮೃತನ ಸಹೋದರ ಆಕ್ರೋಶ
ನಾಮಧಾರಿ ಸಮಾಜದಿಂದ ಸೂಕ್ತ ತನಿಖೆಗೆ ಆಗ್ರಹ – ಕೃಷ್ಣ ನಾಯ್ಕ ನಾಮಧಾರಿ ಸಮಾಜದ ಅಧ್ಯಕ್ಷ
ಭಟ್ಕಳ: ವಾಹನ ಅಪಘಾತದ ವಿಷಯದಲ್ಲಿ ಭಟ್ಕಳ ಶಹರ ಠಾಣೆಯ ಪಿಎಸ್‌ಐ ನೀಡಿದ ಕಿರುಕುಳವನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೊರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಭಟ್ಕಳ ತಾಲೂಕಿನ ಹಸ್ರವಳ್ಳಿಯಲ್ಲಿ ನಡೆದಿದೆ.
ಪಟ್ಟಣದ ಮಣ್ಕುಳಿ ನಿವಾಸಿ ಕಲ್ಮರ್ಗಿಮನೆ ಮಾರುತಿ ನಾಗಪ್ಪ ನಾಯ್ಕ(63) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ತಮ್ಮ ಹಸ್ರವಳ್ಳಿಯ ತೋಟದ ಮನೆಯಲ್ಲಿ ಗುರುವಾರ ನಸುಕಿನ ಜಾವ ತಮ್ಮ ತೋಟದ ಮನೆಯ ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅ.18ರಂದು ಬೈಕ್ ಅಪಘಾತದ ವಿಷಯದಲ್ಲಿ ಭಟ್ಕಳ ಶಹರ ಠಾಣೆಯ ಪಿಎಸ್‌ಐ ಸಾರ್ವಜನಿಕವಾಗಿ ಇವರನ್ನು ನಿಂದಿಸಿ, ವಾಹನದ ಕೀಯನ್ನು ಕಸಿದುಕೊಂಡು ಅವಮಾನಿಸಿದ್ದಾರೆ. ಇದನ್ನೆ ಮನಸ್ಸಿಗೆ ಹಚ್ಚಿಕೊಂಡ ಮಾರುತಿ ನಾಯ್ಕ ತಮ್ಮ ತೋಟದ ಮನೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮ್ರತನ ಸಹೋದರ ಮಣ್ಕುಳಿ ಸುಬ್ರಾಯ ನಾಗಪ್ಪ ನಾಯ್ಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣವನ್ನು ಗ್ರಾಮೀಣ ಠಾಣಾ ಪಿಎಸ್ಐ ಮೂಯೂರ ಪಟ್ಟಣ ಶೆಟ್ಟಿ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.
ನನ್ನ ತಮ್ಮನನ್ನ ಸರ್ವನಾಶ ಮಾಡಿ ಸಾಯಿಸಿದ್ದೆ ಶಹರ ಠಾಣೆ ಪಿಎಸ್ಐ- ಮೃತನ ಸಹೋದರ ಆಕ್ರೋಶ
ಅಪಘಾತವೊಂದರ ವಿಚಾರವಾಗಿ ಆಟೋ ರಿಕ್ಷಾ ಚಾಲಕರು ಮತ್ತೆ ನನ್ನ ತಮ್ಮನ ಮಧ್ಯೆ ರಾಜಿ ನಡೆದಿದ್ದರು ಸಹ
ಶಹರ ಠಾಣೆ ಪಿಎಸ್ಐ ಅವರು ನನ್ನ ಸಹೋದರ ಮಾರುತಿಯನ್ನು ಮಾನಸಿಕವಾಗಿ ಚಿತ್ರಹಿಂಸೆಕೊಟ್ಟು ಅವಮಾನಿಸಿದ್ದಾರೆ. ಇದನ್ನೇ ತಲೆಗೆ ಹಚ್ಚಿಕೊಂಡು ಆತ ಬುಧವಾರದಂದು ಸಂಜೆ ತನ್ನ ಕುಟುಂಬದವರಿಗೆ ಸ್ನೇಹಿತರಿಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸಿಕೊಂಡಿದ್ದರು. ಸ್ಟೇಟ್ ಬ್ಯಾಂಕ್ ಅಡೆಂಡರ ಆಗಿ ಕೆಲಸ ನಿರ್ವಹಿಸುತ್ತಿದ್ದು 2 ವರ್ಷದ ಹಿಂದೆ ನಿವ್ರತ್ತಿ ಹೊಂದಿದ್ದರು. ನಾನು ಗದ್ದೆ ಕೆಲಸ ಮಾಡಿ ಜೀವನ ನಡೆಸಿಕೊಂಡು ಬಂದಿದ್ದು ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ತನ್ನ ಪಿಎಪ್ ಹಣದಿಂದ ಮದುವೆ ಮಾಡಿಸುವುದಾಗಿ ಹೇಳಿದ್ದ ತಮ್ಮ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಿಎಸ್ಐ ಅವರು ತನ್ನ ತಮ್ಮನನ್ನು ಸಾರ್ವಜನಿಕವಾಗಿ ಅವಮಾನಿಸಿ ಎಳೆದಾಡಿದ್ದು ಆತನಿಗೆ ಮಾನಸಿಕವಾಗಿ ನೊಂದಿದ್ದಾನೆ. ಈಗ ನನ್ನ ಮನೆಗೆ ಬೆಂಕಿ ಬಿದ್ದಿದೆ ಈ ಎಲ್ಲಧಕ್ಕು ಪಿಎಸ್ಐ ಅವರೇ ಕಾರಣ ಎಂದು ಆರೋಪಿಸಿ ದೂರಿನಲ್ಲಿ ದಾಖಲಿಸಿದ್ದಾರೆ.
ನಾಮಧಾರಿ ಸಮಾಜದಿಂದ ಸೂಕ್ತ ತನಿಖೆಗೆ ಆಗ್ರಹ – ಕೃಷ್ಣ ನಾಯ್ಕ ನಾಮಧಾರಿ ಸಮಾಜದ ಅಧ್ಯಕ್ಷ
ಓರ್ವ ಹಿರಿಯ ನಾಗರಿಕ ವ್ಯಕ್ತಿಯೋರ್ವನ ಜೊತೆಗೆ ಶಹರ ಠಾಣೆ ಪಿಎಸ್ಐ ಅವರು ನಡೆದುಕೊಂಡ ವರ್ತನೆ ಸರಿಯಲ್ಲ. ಬ್ಯಾಂಕನಲ್ಲಿ 35 ವರ್ಷ ಸೇವೆ ಸಲ್ಲಿಸಿದ ವ್ಯಕ್ತಿಯ ಬಳಿ ಮಾತನಾಡುವ ರೀತಿ ಸಮಂಜಸವಲ್ಲ.
ಪಿಎಸ್ಐ ಅವರ ಮಾತಿನ ದಾಟಿಯು ಹಿರಿಯ ನಾಗರಿಕರಾದ ಮಾರುತಿ ನಾಯ್ಕ ಅವರಿಗೆ ಮಾನಸಿಕವಾಗಿ ಹಚ್ಚಿಕೊಳ್ಳುವಂತೆ ಮಾಡಿದ್ದು ಅದು ಆತ್ಮಹತ್ಯೆಗೆ ಪ್ರಚೋದನೆ ಮಾಡುವಂತೆ ಮಾಡಿದ್ದಾರೆ. ಆಟೋ ರಿಕ್ಷಾ ಮತ್ತು ಮಾರುತಿ ನಾಯ್ಕ ಅವರ ಬೈಕ್ ನಡುವೆ ನಡೆದ ಅಫಘಾತದಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಆದರೆ ಮಾರುತಿ ನಾಯ್ಕ ಅವರ ಬೈಕನ್ನು ಪೋಲಿಸ್ ಠಾಣೆಯಲ್ಲಿ ಇರಿಸಿದ್ದು ಅವರಿಗೆ ಆತ್ಮಹತ್ಯೆ ಮಾಡಲು ಯತ್ನಿಸುವಂತೆ ಮಾಡಿದೆ. ಈ ಬಗ್ಗೆ ಪೋಲಿಸ್ ಹಿರಿಯ ಅಧಿಕಾರಿಯನ್ನು ನಾಮಧಾರಿ ಸಮಾಜದ ಕಮಿಟಿಯು ಸಂಪರ್ಕಿಸಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಸಿಗಬೇಕೆಂಬ ಒತ್ತಾಯ ಇಲ್ಲವಾದಲ್ಲಿ ಸಮಾಜವು ಈ ಕುಟುಂಬದ ಪರವಾಗಿ ಇರಲಿದ್ದೇವೆ ಎಂದು ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಹೇಳಿದರು.