ಪತ್ನಿ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಆರೋಪಿಯ ಮನೆಗೆ ಮಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯ ತಂಡದ ಅಧಿಕಾರಿಗಳ ಭೇಟಿ

ಭಟ್ಕಳ :- ತಾಲೂಕಿನ ಮುರ್ಡೇಶ್ವರ ನಿವಾಸಿ ಶಿಲ್ಪಿ ಕೆಲಸ ಮಾಡುತ್ತಿದ್ದ ಲೋಕೇಶ ನಾಯ್ಕ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತ್ನಿಯಾದ ೩೦ ವರ್ಷದ ನಂದಿನಿ ಲೋಕೇಶ ನಾಯ್ಕಅವರನ್ನು ಕುತ್ತಿಗೆ ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆಯನ್ನು ಚುರುಕು ಗೊಳಿಸಿದ್ದಾರೆ.

ಆರೋಪಿಯನ್ನು ಸ್ಥಳ ಮಹಜರು ನಡೆಸಲು ಕರೆದುಕೊಂಡು ಬಂದಿದ್ದು, ಅದೆ ಸಮಯದಲ್ಲಿ ಮಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯ ತಂಡದ ಅಧಿಕಾರಿಗಳು ಬೇಟಿ ನೀಡಿದ್ದಾರೆ. ಕೊಲೆ ಮಾಡಲು ಬಳಸಿದ ಆಯಧವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತಮಹಿಳೆ ಆಗಾಗ ಮನೆ ಬಿಟ್ಟು ತೆರಳುತ್ತಿರುವದು ಪತಿಯ ಆಕ್ರೋಶಕ್ಕೆ ಕಾರಣವಾಗಿದ್ದು ಸುಮಾರು 15 ವರ್ಷಗಳಿಂದ ಪ್ರೀತಿ ಮಾಡಿ 13 ವರ್ಷಗಳಿಂದ ಮದುವೆಯಾಗಿ ಸಂಸಾರ ನಡೆಸಿದ್ರು ಎಂದು ತಿಳಿದು ಬಂದಿದೆ.

ಮೂರ್ತಿ ಶಿಲ್ಪ ಕಲಾವಿದನಾಗಿದ್ದ ಯುವಕನಿಗೆ ಸುಮಾರು 15 ವರ್ಷಗಳ ಹಿಂದೆ ದೇವಸ್ಥಾನದ ಕಲಾಕೃತಿಗಳ ಕೆತ್ತನೆಗೆ ಮಂಗಳೂರಿಗೆ ತೆರಳಿದ್ದ ವೇಳೆ ಯುವತಿಯ ಪರಿಚಯವಾಗಿತ್ತು ಅನ್ಯೋನ್ಯವಾಗಿದ್ದ ಇವರಿಗೆ 12 ವರ್ಷದ ಪುತ್ರ ಹಾಗೂ 10 ವರ್ಷದ ಪುತ್ರಿಯಿದ್ದಾರೆ.

ಮಂಗಳೂರು ಉಳ್ಳಾಲ ಮೂಲದ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ್ದ ಮಹಿಳೆ, ಕೂಡು ಕುಟುಂಬವಿದ್ದ ಮನೆಯಲ್ಲಿ ಒಬ್ಬೊಬ್ಬರು ಬೇರೆ ಬೇರೆ ಮನೆ ಮಾಡಿಕೊಂಡ ಬಳಿಕ ಲೋಕೇಶ ನಾಯ್ಕ ಕುಟುಂಬ ಮಾತ್ರ ಮುರುಡೇಶ್ವರದಲ್ಲಿತ್ತು ತಂದೆ, ತಾಯಿ, ಮಗ, ಸೊಸೆ ಹಾಗೂ ಮಕ್ಕಳಿಬ್ಬರು ಮಾತ್ರ ಮರುಡೇಶ್ವರದಲ್ಲಿದ್ದರು

ಕಳೆದ ಮೂರು ವರ್ಷಗಳಿಂದ ಮೃತ ಮಹಿಳೆಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಚಟ ಪ್ರಾರಂಭವಾಗಿದ್ದು,ಸಂಪರ್ಕವಾದವರ ಜತೆ ಕ್ಲೋಸ್ ಚ್ಯಾಟಿಂಗ್ ಹಾಗೂ 12 ಗಂಟೆಯ ನಂತ್ರ ಮನೆಯಿಂದ ಹೊರಕ್ಕೆ ತೆರಳಿ ಬೆಳಗ್ಗೆ 4 ಗಂಟೆಗೆ ಬರುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದೆ.ಗಂಡ ಶಿಲ್ಪಿಯಾಗಿದ್ದರಿಂದ ಬೇರೆ ಬೇರೆ‌ ಊರಿಗೆ ಕೆಲಸಕ್ಕೆ ಹೋಗುತ್ತಿದ್ದ ಕಾರಣ ಪತ್ನಿಯದ್ದೇ ಕಾರುಬಾರಾಗಿತ್ತು ಈವರೆಗೆ ಮೂರ್ನಾಲ್ಕು ಬಾರಿ ಮನೆ ಬಿಟ್ಟು ಬೇರೆಯವರ ಜತೆ ತೆರಳಿದ್ದಳು ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ.

ಎಷ್ಟು ಬಾರಿ ಪತ್ನಿ ಬೇರೆಯವರ ಜತೆ ಹೋದರೂ ತನ್ನ ಜೀವನಕ್ಕೆ, ಮಕ್ಕಳ ಭವಿಷ್ಯಕ್ಕೆ ಪತ್ನಿ ಬೇಕೆಂದು ಮತ್ತೆ ಮನೆಗೆ ಕರೆ ತರುತ್ತಿದ್ದ ಪತಿ,ಕಳೆದ ಮೂವತ್ತು ದಿನಗಳ ಹಿಂದೆಯೂ ಕಡೂರಿನ ಬೀರೂರಿನಲಿ ಬೇರೆಯವನ ಜತೆ ತೆರಳಿದ್ದಾಗ ಪರಿಚಯಸ್ಥರು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದರು.

ಗಂಡ ಹಾಗೂ ಸಂಬಂಧಿಕರು ಅಲ್ಲಿಗೂ ತೆರಳಿ ಮಹಿಳೆಯನ್ನು ವಾಪಾಸ್ ಕರೆದುಕೊಂಡು ಬಂದಿದ್ದರು ಸಂಬಂಧಿಕರು ಬುದ್ಧಿವಾದ ಹೇಳಿ ಗಂಡನ ಜತೆ ಮನೆಗೆ ಕಳುಹಿಸಿದ್ದರು.ಕಡೂರಿನಿಂದ ಮನೆಗೆ ಕರೆದುಕೊಂಡು ಬಂದ 3ನೇ ದಿನಕ್ಕೆ ನನಗೆ ಗಂಡ ಹಾಗೂ ಮಕ್ಕಳು ಬೇಡ, ನನ್ನಷ್ಟಕ್ಕೇ ಬಿಡಿ ಅಂತಾ ಪಟ್ಟು ಹಿಡಿದಿದ್ದ ಮಹಿಳೆ,ವಾಪಾಸ್ ಬಿಟ್ಟು ಹೋದರೂ ಮತ್ತೆ ಪತ್ನಿಯನ್ನು ಕರೆದುಕೊಂಡು ಬಂದಿದ್ದ ಪತಿ ಲೋಕೇಶ್.

20 ದಿನಗಳ ಹಿಂದೆ ಸೊಸೆಯ ಇದೇ ಕೃತ್ಯದಿಂದ ಮರ್ಯಾದೆಗೆ ಅಂಜಿ ಮಾವ ಸುಬ್ಬ ನಾಯ್ಕ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಇತ್ತೀಚೆಗೆ ಸಂಬಂಧಿಕರು ಬೇರೆ ಮದುವೆ ಆಗಲು ಲೋಕೇಶ್‌ಗೆ ತಿಳಿಸಿದ್ದು,ಕಳೆದ ಮೂರು ದಿನಗಳ ಹಿಂದೆಯಷ್ಟೇ ಪತ್ನಿ ಜತೆ ಮತ್ತೆ ಹೊಸ ಜೀವನ ಮಾಡಬೇಕೆಂಬ ಉದ್ದೇಶದಿಂದ ಮುರುಡೇಶ್ವರದ ಸಬ್ಬತ್ತಿ ಕ್ರಾಸ್‌ನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು

ಹೊಸದಾಗಿ ಕಬೋರ್ಡ್, ಚಪಾತಿ ಮಣೆಯನ್ನೆಲ್ಲಾ ಖರೀದಿ ಮಾಡಿದ್ದ ಪತಿ, ಮತ್ತೆ ಮಹಿಳೆ ಮೊಬೈಲ್ ಹಿಡಿದುಕೊಂಡು ಕುಳಿತಿದ್ದಾಗ ಯಾರಿಗೆ ಕರೆ ಮಾಡ್ತಿರುವುದಾಗಿ ಪತಿ ಹಾಗೂ ಪತ್ನಿ ನಡುವೆ ಜಗಳವಾಗಿತ್ತು,ಏನಾದರೂ ಸೀಕ್ರೆಟ್ ಬಿಟ್ಟು ಕೊಡದ ಪತ್ನಿಯ ಮೇಲಿದ್ದ ಕೋಪ ಸಿಟ್ಟಿಗೆ ತಿರುಗಿ ಪತ್ನಿ ಮೇಲೆ ಕತ್ತಿ ಬೀಸಿದ್ದ ಪತಿ ,ಕೈ ಹಾಗೂ ಹೊಟ್ಟೆಯ ಮೇಲೆ ಗಾಯವಾಗಿದ್ದನ್ನು ಹಿಡಿದುಕೊಂಡು ಬಾಡಿಗೆ ಮನೆಯಿಂದ ಹೊರಗೋಡಿದಾಗ ಬೆನ್ನಟ್ಟಿ ಬಂದ ಪತಿ ಕುತ್ತಿಗೆಯನ್ನೇ ಕುಯ್ದು ಓಡಿದ್ದ ,ಇಷ್ಟು ವರ್ಷಗಳ ಕಾಲ ಬಹಳಷ್ಟು ಪ್ರೀತಿಸಿದ್ದ ಪತ್ನಿ ಬದಲಾಗದ್ದನ್ನು ನೋಡಿದ ಪತಿ ಕೊನೆಗೆ ಕೊಲೆಯೇ ಮಾಡಿ ಬಿಟ್ಟಿದ್ದ,ಮಹಿಳೆಯ ಕೃತ್ಯದಿಂದ ಗಂಡ ಕೊಲೆಗಾರನಾಗಿಬಿಟ್ಟಿದ್ದು ,‌ಮಕ್ಕಳಿಬ್ಬರು ಅನಾಥರಾದರು ಎಂಬುದೇ ಬೇಸರದ ಸಂಗತಿ ಯಾಗಿದೆ.


ಈ ಬಗ್ಗೆ ಹತ್ಯೆಯಾದ ನಂದಿನಿಯ ಸಹೋದರ ಕೃಷ್ಣ ಮಾತನಾಡಿ ಇಬ್ಬರು ಪ್ರೀತಿಸಿ ಎರಡು ಕುಟುಂಬದವನ್ನು ಒಪ್ಪಿಸಿ ಮದುವೆ ಆಗಿದ್ದರು. ಬಾವ ಹಾಗೂ ಬಾವನ ಮನೆಯವರೊಂದಿಗೆ ನಮ್ಮ ಕುಟುಂಬದವರು ಒಳ್ಳೆಯ ಒಡನಾಟದಿಂದಿದ್ದರು. ಅಕ್ಕನ ಮಾವ ಹಾಗೂ ಅತ್ತೆ ನಾನು ಇಲ್ಲಿಗೆ ಬಂದಾಗ ನನ್ನನ್ನು ಸ್ವಂತ ಮಗನ ಹಾಗೆ ನೋಡುತ್ತಿದ್ದರು. .ಅತೀ ಯಾದ ಮೊಬೈಲ್ ಬಳಕೆ ನನ್ನ ಅಕ್ಕನ ಸಾವಿಗೆ ಕಾಣವಾಗಿರಬಹುದು ಎಂದು ನೋವನ್ನು ತೋಡಿಕೊಂಡಿದ್ದಾರೆ.

ಉದಯ ನಾಯ್ಕ ನುಡಿಸಿರಿ ನ್ಯೂಸ್‌ ಸಿದ್ದಾಪುರ