ಕಾರವಾರ : ತಾಲೂಕಿನ ಮೂಡಗೇರಿ ಸಭಾಭವನದಲ್ಲಿ ಈ ಹಿಂದೆ ಕೆಐಡಿಪಿ ವತಿಯಿಂದ ಸರ್ಕಾರ ಸ್ವಾಧೀನ ಪಡಿಸಿಕೊಂಡ ಜಮೀನಿನ, ಭೂ ಸಂತ್ರಸ್ತರ ವತಿಯಿಂದ ಮಾನ್ಯ ಮಾಜಿ ಶಾಸಕಿ ರೂಪಾಲಿ ನಾಯ್ಕರವರಿಗೆ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯ್ತು.
ಮೂಡಗೇರಿಯಲ್ಲಿ ಈ ಕಳೆದ 26 ವರ್ಷಗಳಿಂದ ಭೂ ಸಂತ್ರಸ್ತರಿಗೆ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ಮಾಜಿ ಶಾಸಕಿ ರೂಪಾಲಿ ನಾಯ್ಕರವರು ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಇರುವಾಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕೈಗಾರಿಕಾ ಮಂತ್ರಿ ಮುರುಗೇಶ್ ನಿರಾಣಿ ಯವರಿಗೆ ಇಲ್ಲಿಯ ಜನರ ಕಷ್ಟವನ್ನು ಸವಿಸ್ತಾರವಾಗಿ ವಿವರಿಸಿ ಭೂ ಸಂತ್ರಸ್ತರಿಗೆ ಪರಿಹಾರ ನೀಡುವ ದೊಡ್ಡ ಕೆಲಸ ಮಾಡಿಕೊಟ್ಟಿದ್ದರು. ಇದರ ಪರಿಣಾಮ ಈಗಾಗಲೇ 3 ಜನ ಭೂ ಸಂತ್ರಸ್ತರಿಗೆ RTGS ಮೂಲಕ ಅವರ ಬ್ಯಾಂಕ್ ಖಾತೆಗೆ ಸರ್ಕಾರದ ಪರಿಹಾರ ಹಣ ಸಂದಾಯವಾಗಿರುತ್ತದೆ.
ಇತರ ಭೂ ಸಂತ್ರಸ್ತರಿಗೆ ಪರಿಹಾರ ಈಗ ಬರಲು ಪ್ರಾರಂಭವಾಗಿದೆ. ಇದಕೆಲ್ಲ ಕಾರಣ ಶ್ರೀಮತಿ ರೂಪಾಲಿ ನಾಯ್ಕರವರಾಗಿದ್ದು ಅವರ ಪ್ರಯತ್ನದಿಂದಲೇ ಪ್ರತಿ ಗುಂಟೆಗೆ 1ಲಕ್ಷ 25 ಸಾವಿರ ಪರಿಹಾರ ಸಿಗುವಂತಾಗಿದೆ ಎಂದು ಭೂ ಸಂತ್ರಸ್ತರು ಹಾಗೂ ಗ್ರಾಮಸ್ಥರು ರೂಪಾಲಿ ನಾಯ್ಕರ ಕಾರ್ಯ ಸಾಧನೆಯನ್ನು ಕೊಂಡಾಡಿದ್ರು..ಈ ಸಂದರ್ಭದಲ್ಲಿ ಮೂಡಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಂದ್ರ ಗಾಂವಕಾರ, ಉಪಾಧ್ಯಕ್ಷೆ ಜ್ಯೋತಿ ಚೋಳಾರ್ ಹಾಗೂ ಪಂಚಾಯತ್‌ನ ಸಹ ಸದಸ್ಯರು ಮತ್ತು ಭೂ ಸಂತ್ರಸ್ತರು ರೂಪಾಲಿ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಿದ್ರು..
ಗೌರವ ಸ್ವೀಕರಿಸಿ ಮಾತನಾಡಿದ ಮಾಜಿ ಶಾಸಕಿ ರೂಪಾಲಿ ನಾಯ್ಕ, ಈ ಸನ್ಮಾನವನ್ನು ನಾನು ಎಂದು ಮರೆಯದೇ ಜನರ ಸಂಕಷ್ಟಗಳಿಗೆ ಸದಾ ಪರಿಹಾರ ಹುಡುಕಿ ಕೊಟ್ಟು ನಿಮ್ಮ ಜೊತೆಗೆ ಸದಾ ಇರುತ್ತೇನೆ. ಸಂತ್ರಸ್ತರಿಗೆ ಅನ್ಯಾಯ ಆಗದಂತೆ ಯಾವ ರೀತಿ ಕ್ರಮ ಕೈಗೊಳ್ಳಲಾಯ್ತು ಎಂದು ವಿವರಿಸಿದ್ರು. ಮುಡಗೇರಿಯಲ್ಲಿ 26 ವರ್ಷದ ಬಳಿಕ 73 ಎಕರೆ ಪ್ರದೇಶದ ಸಂತ್ರಸ್ತರಿಗೆ ನ್ಯಾಯ ಸಿಕ್ಕಿದೆ. ಉಳಿದವರ ಬೆಂಬಲಕ್ಕೆ ನಾನು ಸದಾ ಅವರ ಜೊತೆ ಇರುತ್ತೇನೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ರು.
ಈ ವೇಳೆ ನಂದ ಕಿಶೋರ್ ಸಾರ್ವಜನಿಕರು, ಊರ ನಾಗರಿಕರು ಹಾಗೂ ಕಾರ್ಯಕರ್ತರು ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ರು..