ನದಿಗಿಳಿಯದಿರಿ, ಮೊಸಳೆಗಳಿವೆ ಎಂಬ ಮುನ್ನೆಚ್ಚರಿಕೆಯ ಫಲಕಗಳನ್ನು ಹಾಕಲಾಗಿದ್ದರೂ, ಅಲೈಡ್ ಪ್ರದೇಶದಲ್ಲಿ ನದಿಗಿಳಿಯುತ್ತಿರುವ ಜನರು

ದಾಂಡೇಲಿ : ನದಿಗಿಳಿಯದಿರಿ, ಮೊಸಳೆಗಳಿವೆ ಎಂಬ ಮುನ್ನೆಚ್ಚರಿಕೆಯ ಫಲಕಗಳನ್ನು ಹಾಕಲಾಗಿದ್ದರೂ ದಾಂಡೇಲಿ ನಗರದ ಹಳಿಯಾಳ ರಸ್ತೆಯಲ್ಲಿ ಬರುವ ಅರೈಡ್ ಪ್ರದೇಶದ ಹತ್ತಿರ ನದಿಯ‌‌‌ ಮಧ್ಯಕ್ಕೆ ಹೋಗಿ ಬಟ್ಟೆ ತೊಳೆಯುವುದು‌ ಒಂದೆಡೆಯಾದರೇ, ಇನ್ನೂ ಯುವಕರು ನದಿ ಮಧ್ಯದಲ್ಲಿ‌ ಮೋಜು ನಡೆಸುತ್ತಿರುವುದನ್ನು ಗಮನಿಸಿದ ವಲಯಾರಣ್ಯಾಧಿಕಾರಿ ಅಪ್ಪರಾವ್ ಕಲಶೆಟ್ಟಿಯವರ ನೇತೃತ್ವದ ಅರಣ್ಯ ಸಿಬ್ಬಂದಿಗಳ ತಂಡ ಸ್ಥಳಕ್ಕೆ ದೌಡಾಯಿಸಿ ಎಚ್ಚರಿಕೆ ನೀಡಿದ ಘಟನೆ ಸೋಮವಾರ ನಡೆದಿದೆ.

ಈಗಾಗಲೆ ನಗರದಲ್ಲಿ ಮೊಸಳೆ ದಾಳಿಗೊಳಗಾಗಿ ಐವರು ಸಾವನ್ನಪ್ಪಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.