ಹೊನ್ನಾವರ:ಮಿನಿವಿಧಾನಸೌಧದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವ ಮಂಕಾಳ ವೈದ್ಯ

ಹೊನ್ನಾವರ: ಪಟ್ಟಣದ ಮಿನಿವಿಧಾನಸೌಧದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಂಕಾಳ ವೈದ್ಯ ಅವರು ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ಈ ವೇಳೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಸಚಿವರ ಮುಂದೆ ತಮ್ಮ ಸಮಸ್ಯೆಗಳು,ಬೇಡಿಕೆಗಳನ್ನಿಟ್ಟರು. ಕೆಲವು ಸಮಸ್ಯೆಗಳಿಗೆ ಆಯಾ ಇಲಾಖೆಯ ಅಧಿಕಾರಿಗಳನ್ನು ಸ್ಥಳದಲ್ಲಿಯೇ ಪ್ರಶ್ನಿಸಿ ಜನರ ಸಮಸ್ಯೆ ಬಗೆಹರಿಸಿರುವುದು ವಿಶೇಷವಾಗಿತ್ತು. ಬೇಡಿಕೆಗಳನ್ನು ಸ್ವೀಕರಿಸಿ ಈಡೇರಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಎಲ್ಲಾ ಇಲಾಖಾ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು. ನೂತನ ತಂತ್ರಜ್ಞಾನದ ಅರ್ಜಿ ಸ್ವೀಕಾರ ಕೊಠಡಿಯನ್ನು ಉದ್ಘಾಟಿಸಿದರು.ಅಹವಾಲು ಸ್ವೀಕಾರದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು,
ಸಾರ್ವಜನಿಕರ ಸಮಸ್ಯೆ,ಬೇರೆ ಬೇರೆ ಇಲಾಖೆಯಿಂದಾಗಬೇಕಾದ ಕೆಲಸ ಕಾರ್ಯ,ಕಳೆದ ನಾಲ್ಕೈದು ವರ್ಷಗಳಿಂದ ಬಗೆಹರಿಯದೆ ಹಾಗೆಯೇ ಉಳಿದಿತ್ತು. 500ಕ್ಕು ಅಧಿಕ ಜನರ ಅಹವಾಲು ಸ್ವೀಕರಿಸಿದ್ದೇನೆ. ಅವರಿಗೆ ಅನುಕೂಲ ಆಗಬೇಕು.ಕೇವಲ ಅವರು ಬಂದು ನನಗೆ ಅರ್ಜಿ ಕೊಡೋದು, ನಾನು ಅವರಿಗೆ ಹೇಳೋದು ಕೆಲಸ ಮಾಡದೆ ಇರೋದು ಆಗಬಾರದು ಎನ್ನುವ ದೃಷ್ಟಿಯಿಂದ ಅಧಿಕಾರಿಗಳನ್ನು ಸ್ಥಳದಲ್ಲಿ ಉಪಸ್ಥಿತರಿರಲು ಸೂಚಿಸಿ, ತಾಲೂಕಿನ ಮಾತ್ರವಲ್ಲದೆ ಬೇರೆ ಬೇರೆ ಕ್ಷೇತ್ರದಿಂದ ಮತ್ತೆ ಇಡೀ ಜಿಲ್ಲೆಯಿಂದ ಎಲ್ಲವರಿಗೂ ಸ್ಪಂದಿಸಿದ್ದೇನೆ. ಜನತೆ ತಹಶೀಲ್ದಾರ್ ಆಫೀಸ್ ಗೆ ಹೋಗುವುದು ಅಂದರೆ ಬೇಜಾರು ಮಾಡಿಕೊಳ್ಳುತ್ತಿದ್ದರು. ಇನ್ನುಮುಂದೆ ಅಂತದ್ದು ಆಗುವುದಿಲ್ಲ.ನಮ್ಮ ಉದ್ದೇಶ ಜನರಿಗೆ ಇವತ್ತು ಬಂದು ಇವತ್ತು ಕೆಲಸ ಆಗವಂತಾಗಬೇಕು ಎನ್ನುವುದಾಗಿದೆ.
ತಾಲೂಕಾ ಕಚೇರಿಯಲ್ಲಿ ಯಾರೇ ಬಂದು, ಏನೇ ಅರ್ಜಿ ಕೊಟ್ಟರು ಅದು ಎಲ್ಲಿ, ಯಾರು,ಎಷ್ಟು ದಿನ ಇಟ್ಟು ಇಟ್ಟಕೊಂಡಿದ್ದಾರೆ ಎಂದು ತಿಳಿಯುವ ಹೊಸ ವ್ಯವಸ್ಥೆನು ಉದ್ಘಾಟನೆ ಮಾಡಿದ್ದೇನೆ ಎಂದರು‌.ತಾಲೂಕಿನಲ್ಲಿ ಅರಣ್ಯ ಅತಿಕ್ರಮಣದಾರರ ಒಕ್ಕಲೆಬ್ಬಿಸುವ ವಿಚಾರದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಎಳು ಎಕರೆ ಅತಿಕ್ರಮಣ ಜಾಗ ಜಿಪಿಎಸ್ ಮಾಡಿ ಕೊಟ್ಟಿದ್ದಾರೆ,ಒಂದುವರೆ ಎಕರೆ ಜಾಗ ಮಾಲ್ಕಿ ಇದೆ. ಜನರಿಗೆ ಅನುಕೂಲ ಆಗಿದೆ,ಅನುಕೂಲ ಆಗುತ್ತಿದೆ,ಆದರೆ ಮತ್ತೆ ಅತಿಕ್ರಮಣ ಮಾಡುತ್ತಾ ಇರುವುದು ಸರಿಯಲ್ಲ. 2018ರ ಪೂರ್ವದಲ್ಲಿ ಜಿಪಿಎಸ್ ಮಾಡಿಕೊಂಡವರನ್ನು ಯಾವುದೇ ಕಾರಣಕ್ಕು ತೆರವು ಮಾಡಲು ಬಿಡುವುದಿಲ್ಲ ಎಂದರು.

ಕಾಸರಕೋಡ್ ವಾಣಿಜ್ಯ ಬಂದರು ಯೋಜನೆ ಬಗ್ಗೆ ಪ್ರತಿಕ್ರಿಯಿಸಿ ಈ ವಿಚಾರ ನ್ಯಾಯಾಲಯದಲ್ಲಿದೆ. ಜನಕ್ಕೆ ಅನುಕೂಲ ಆಗುತ್ತದೆ ಅಂದರೆ ಮಾಡಬೇಕಿತ್ತು.ಜನರಿಗೆ ಅನುಕೂಲ ಇಲ್ಲ ಎಂದು ಅಲ್ಲಿನ ಸ್ಥಳೀಯರೆ ವಿರೋಧ ಮಾಡಿದ್ದಾರೆ. ಅದರಬಗ್ಗೆ ನಾನು ಏನು ಹೇಳುವುದಕ್ಕೆ ಇಷ್ಟ ಪಡುವುದಿಲ್ಲ.ಎಲ್ಲವು ಜನರ ನಿರೀಕ್ಷೆಗೆ ತಕ್ಕಂತೆ ಇರುತ್ತದೆ ಜನರ ವಿರುದ್ಧ ಯಾವುದು ಇರುವುದಿಲ್ಲ ಎಂದರು. ಇನ್ನು, ಮಲ್ಟಿಸ್ಷೇಷಾಲಿಟಿ ಆಸ್ಪತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾಡದಿದ್ದರೆ ನಾನು ಮಾಡುತ್ತೇನೆ,ಅಂದು ಹೇಳಿದ್ದೇನೆ,ಇಂದು ಆ ಮಾತಿಗೆ ಬದ್ದನಾಗಿದ್ದೇನೆ ಎಂದರು. ಶರಾವತಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಗ್ರಾಮೀಣ ಭಾಗಕ್ಕು ಹಂತಹಂತವಾಗಿ ಲಭಿಸಲಿದೆ,ನೀರು,ಆರೋಗ್ಯ ಮೂಲಭೂತ ಸೌಕರ್ಯಗಳಿಗೆ ಎಲ್ಲಿಯು ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.