ದಾಂಡೇಲಿ : ಶ್ರೀ ದಾಂಡೇಲಪ್ಪ ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಅವರ ಹಸಿವನ್ನು ತಣಿಸುವ ನಿಟ್ಟಿನಲ್ಲಿ ಹಳಿಯಾಳ ರಸ್ತೆಯ ಶ್ರೀ ಗಜಾನನ ಯುವಕ ಮಂಡಳ ಮತ್ತು ಯುವತಿ ಮಂಡಳದ ಆಶ್ರಯದಡಿ ಪ್ರತಿವರ್ಷದಂತೆ ಈ ವರ್ಷವೂ ಸಾರ್ವಜನಿಕ ಅನ್ನಸಂಪರ್ಪಣೆ ಕಾರ್ಯವನ್ನು ಶಿಸ್ತುಬದ್ಧವಾಗಿ ಹಾಗೂ ಅಷ್ಟೇ ಯಶಸ್ವಿಯಾಗಿ ಸಂಘಟಿಸಲಾಗಿತ್ತು.
ಶ್ರೀ ದಾಂಡೇಲಪ್ಪ ಜಾತ್ರೋತ್ಸವದ ದಿನ ಕಳೆದ 21 ವರ್ಷಗಳಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಶ್ರೀ ಗಜಾನನ ಯುವಕ ಮತ್ತು ಯುವತಿ ಮಂಡಳದ ಆಶ್ರಯದಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ 15 ಸಾವಿರಕ್ಕೂ ಅಧಿಕ ಭಕ್ತಾದಿಗಳಿಗೆ ಅನ್ನಪ್ರಸಾದವನ್ನು ವಿತರಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಶ್ರೀ ಗಜಾನನ ಯುವಕ ಮಂಡಳ ಮತ್ತು ಯುವತಿ ಮಂಡಳದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಶ್ರಮಿಸಿದ್ದರು.