ಅನ್ಮೋಡಾ ಅಬಕಾರಿ ಚೆಕಪೋಸ್ಟ್ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಸರಾಯಿ ವಶ

ಜೋಯಿಡಾ : ಜೋಯಿಡಾ ತಾಲೂಕಿನ ಅನ್ಮೋಡಾ ಚೆಕಪೋಸ್ಟ್ ಬಳಿ ಖಚಿತ ಮಾಹಿತಿ ಆಧಾರದ ಮೇಲೆ ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದ ಬೈಕ್ ಸಹಿತ ಸರಾಯಿಯನ್ನು ಅನ್ಮೋಡಾ ಅಬಕಾರಿ ಪೋಲಿಸರು ವಶಪಡಿಸಿಕೊಂಡ ಘಟನೆ ನಡೆದಿರುವ ಬಗ್ಗೆ ಇಂದು ಮಂಗಳವಾರ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.

ಹಾವೇರಿ ತಾಲೂಕಿನ ಅಬ್ಬಾಸ್ ಅಲಿ ಮ್ಯಾಗಿನ ಮಟ್ಟಿ ಎಂಬಾತನು ವಾಹನ ಸಂಖ್ಯೆ KA 27, EK 1046 ರಲ್ಲಿ 54 ಲೀ ಗೋವಾ ಮಧ್ಯ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿಯಡಿ ವಾಹನವನ್ನು ಪರಿಶೀಲನೆ ನಡೆಸಿದಾಗ ಅಂದಾಜು 8,640 ರೂ‌ ಮೌಲ್ಯದ ಗೋವಾ ಮದ್ಯ ಹಾಗೂ ರೂ: 50 ಸಾವಿರ ಮೌಲ್ಯದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಉಪ‌ ನಿರೀಕ್ಷಕರುಗಳಾದ ಮಂಜುಕುಮಾರ್ ನಾಯ್ಕ, ಟಿ.ಬಿ.ಮಲ್ಲಣ್ಣನವರ ಹಾಗೂ ಸಿಬ್ಬಂದಿಗಳಾದ ಸದಾಶಿವ ರಾಥೋಡ, ಈರಣ್ಣ ಕುರುಬೇಟ್, ಆರ್,ಎನ್ ನಾಯಕ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು‌.

ಹಾಗೆ ನೋಡಿದರೇ ಅನ್ಮೋಡಾ ಅಬಕಾರಿ ತನಿಖಾ ಠಾಣೆಯ ವ್ಯಾಪ್ತಿಯಲ್ಲಿ ದಿನಕ್ಕೆ 100 ಪ್ರಕರಣಗಳನ್ನು ದಾಖಲಿಸಿ ಕೊಳ್ಳಬಹುದಾದ ಅವಕಾಶವಿದ್ದು, ಆ ಅವಕಾಶವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಬಳಕೆ ಮಾಡಬೇಕಾಗಿದೆ.