ಭಟ್ಕಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಟ್ಕಳ ವತಿಯಿಂದ ವಿಜಯದಶಮಿ ಪ್ರಯುಕ್ತ ಗಣವೇಷಧಾರಿ
ಸ್ವಯಂ ಸೇವಕರಿಂದ ನಡೆದ ಭವ್ಯ ಪಥಸಂಚಲನಕ್ಕೆ ವಿವಿ ರಸ್ತೆಯಲ್ಲಿನ ವಡೇರ ಮಠ ಕಂಪೌಂಡನಲ್ಲಿ ಚಾಲನೆ ನೀಡಿಲಾಯಿತು.
ಆರ್.ಎಸ್.ಎಸ್ ಗೀತೆ ಹೇಳುವ ಮೂಲಕ ಪಥ ಸಂಚಲನ ವಡೇರ ಮಠ ಕಂಪೌಂಡ ಆವರಣದದಿಂದ ಪ್ರಾರಂಭವಾಯಿತು. ಪಥ ಸಂಚಲನ ಚನ್ನಪಟ್ಟಣ ಹನುಮಂತ ದೇವಸ್ಥಾನ ಮಾರ್ಗವಾಗಿ ಹೂವಿನ ಚೌಕ, ಮಾರಿಕಟ್ಟೆಯಿಂದ ಕಳಿಹನುಮಂತ ದೇವಸ್ಥಾನ ರಘುನಾಥ ರಸ್ತೆ ಮೂಲಕ ಪುನಃವಡೇರ ಮಠ ಕಂಪೌಂಡನಲ್ಲಿ ಅಂತ್ಯಗೊಂಡಿತು.
ಬಳಿಕ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಉತ್ತರ ದಕ್ಷಿಣ ಪ್ರಾಂತ , ರಾಷ್ಟ್ರೀಯ ಸ್ವಯಂಸೇವಕ ಸಂಘದ
ಅರುಣ್ ಕುಮಾರ್ ರಾಯಚೂರು ಮಾತನಾಡಿ ನಮ್ಮ ಸಂಘ ಪ್ರಾರಂಭವಾದ ಕಾಲದಲ್ಲಿ ಇದ್ದಂತಹ ಪರಿಸ್ಥಿತಿ ಹಿಂದೂ ಸಮಾಜಕ್ಕೆ ಈಗಿಲ್ಲ. ಆಗಿನ ಕಾಲದಲ್ಲಿ ಹಿಂದೂ ಸಮಾಜ ಜಾತಿ ಪದ್ಧತಿ ಮತ್ತು ಅನಕ್ಷರಕ್ಷತೆಯ ಕಾರಣ ತುಂಬಾ ಹಿಂದೆ ಉಳಿದಿತ್ತು.
ನಮ್ಮ ದೇಶದ ಪ್ರಮುಖರೆ ಹಿಂದೂ ಎಂದರೆ ಹೇಡಿ ಎಂದು ಹೇಳಿದ್ದರು.ಹಿಂದೂ ಎಂದರೆ ಅಪಮಾನ ಎಂದು ತಿಳಿಯುತ್ತಿದ್ದ ಕಾಲದಿಂದ ಜಾತಿಯಿಂದ ಭಾಷೆಗಳಿಂದ ಒಡೆದು ಹೋಗಿದ್ದ ಹಿಂದೂ ಸಮಾಜವನ್ನು ಒಟ್ಟಿಗೆ ಸೇರಿಸುವಂತಹ ಕಾರ್ಯ ಮಾಡಿದ್ದು ಒಂದು ಸಣ್ಣ ಸಂಗತಿಯಲ್ಲ. ನಮ್ಮ ರಾಷ್ಟ್ರೀಯ ಸ್ವಯಂ ಸೇವಕ ಸಂಘದ
98 ವರ್ಷಗಳ ಪ್ರಯತ್ನ ಹಿಂದೂ ಸಮಾಜದ ಬದಲಾವಣೆಗೆ ಕಾರಣವಾಗಿದೆ. ಈಗ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧ ಒಂದು ಸಮುದಾಯ ಬೇರೆಯವರಿಗೆ ಕೆಟ್ಟದ್ದನ್ನು ಬಯಿಸಿದ ಕಾರಣಕ್ಕೆ ನಡೆದ ಘಟನೆ.ಹಿಂದೂ ಸಮಾಜ ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ ಆದರೆ ಜಗತ್ತಿನಲ್ಲಿ ಕೆಲವರಿದ್ದಾರೆ ಅವರ ಹುಟ್ಟೇ ಕೆಟ್ಟದ್ದಕ್ಕಾಗಿದೆ. ಬರಿ ಉಗ್ರಗಾಮಿಗಳು ಕಳ್ಳರು ಅವರಲ್ಲಿ ತುಂಬಿದ್ದಾರೆ. ಯಾವುದೋ ಸ್ವರ್ಗ ಬೇಕೆಂದು ಇಲ್ಲಿ ನರಕ ಸೃಷ್ಟಿ ಮಾಡುತ್ತಾರೆ ತಮ್ಮನ್ನು ನರಕದಲ್ಲಿ ಇರಿಸಿಕೊಳ್ಳುತ್ತಾರೆ ಬೇರೆಯವರಿಗೂ ನರಕ ತೋರಿಸುತ್ತಾರೆ.ಮತಾಂದತೆಯಿಂದ ಜಗತ್ತಿಗೆ ದೊಡ್ಡ ಪೀಡಕರಾಗಿ ಬದಲಾಗಿದ್ದಾರೆ ಎಂದು ಹೇಳಿದರು
ಈ ಪಥ ಸಂಚಲನದಲ್ಲಿ ಸಣ್ಣ ಸಣ್ಣ ಮಕ್ಕಳು ಹಾಗೂ 85 ವರ್ಷದ ವಿಠ್ಠಲ ರಾಮದಾಸ ಪ್ರಭು 75 ವರ್ಷದಿಂದ ತಮ್ಮನ್ನು ತಾವು ರಾಷ್ಟ್ರೀಯ ಸ್ವಯಂ ಸೇವಕ ಸಂಘ ತೋಡಗಿಕೊಂಡಿರುವುದು ವಿಶೇಷವಾಗಿತ್ತು. ಹಾಗೂ ಈ ವೇಳೆ ಮಾಜಿ ಶಾಸಕ ಸುನೀಲ ನಾಯ್ಕ ಕೂಡ ಪಥ ಸಂಚಲನದಲ್ಲಿ ಭಾಗವಹಿಸಿದ್ದು ಸುಮಾರು 500ಕ್ಕೂ ಅಧಿಕ ಮಂದಿ ಭಾಗಹಿಸಿದ್ದರು