ಸಿದ್ದಾಪುರದಲ್ಲಿ ಸ್ವಂತ ಬಳಕೆಯ ವಾಹನದಲ್ಲಿ ಚಾಲಕರೊಬ್ಬರು ಬಾಡಿಗೆ ಓಡಿಸುತ್ತಿರುವುದು ಕಂಡು ಬಂದ ಹಿನ್ನೆಲೆ ಸಾರಿಗೆ ಇಲಾಖೆ ಅಧಿಕಾರಿಗಳು ಚಾಲಕನಿಗೆ ಎಚ್ಚರಿಕೆ ನೀಡಿದ ಘಟನೆ ನಡೆದಿದೆ..
ಜೋಗ ಕಡೆಯಿಂದ ಸಿರ್ಸಿ ಕಡೆಗೆ ಹೋಗುತ್ತಿದ್ದ ತುಫಾನ್ ವಾಹನದಲ್ಲಿ ಮುಧೋಳದಿಂದ ಪ್ರವಾಸಿಗರು ಬಂದು ಸ್ಥಳೀಯ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ವಾಪಾಸ್ ತೆರಳುವಾಗ ಸಿದ್ದಾಪುರದ ಹಳದಿ ಬೋರ್ಡ್ ವಾಹನ ಮಾಲಕರು ಚಾಲಕರು ಗಮನಿಸಿ ಆರ್‌ಟಿಓ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಆರ್‌ಟಿಓ ಅಧಿಕಾರಿಗಳು ವಾಹನ ತಡೆದು ಚಾಲಕನನ್ನ ವಿಚಾರಿಸಿ ದಂಡ ವಿಧಿಸಿ ಎಚ್ಚರಿಕೆ ನೀಡಿದ್ರು..
ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ ಓಡಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಹಳದಿಬೋರ್ಡ್ ವಾಹನ ಚಾಲಕ ಮತ್ತು ಮಾಲಕರು ಈಗಾಗಲೇ ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್, ಎಸಿ, ಹಾಗೂ ತಹಸೀಲ್ದಾರ್‌ಗೆ ಹಲವು ಬಾರಿ ಮಾಹಿತಿ ನೀಡಿದ್ರು.
ಇನ್ನೂ ಈ ಬಗ್ಗೆ ಮಾಹಿತಿ ನೀಡಿದ ಕೂಡಲೇ ಬಂದು ಸೂಕ್ತ ಕ್ರಮ ಕೈಗೊಂಡು ದಂಡ ವಿಧಿಸಿ ಎಚ್ಚರಿಕೆ ನೀಡಿರುವ ಆರ್‌ಟಿಓ ಮತ್ತು ಸಿಬ್ಬಂದಿಗಳಿಗೆ ಹಳದಿ ಬೋರ್ಡ್ ವಾಹನ ಚಾಲಕ ಮಾಲಕರು ಅಭಿನಂದನೆ ತಿಳಿಸಿದ್ರು. ಹಾಗೂ ಸ್ಥಳೀಯವಾಗಿ ವೈಟ್ ಬೋರ್ಡ್ ನಲ್ಲಿ ಬಾಡಿಗೆ ಓಡಿಸುತ್ತಿರುವುದು ಕಂಡು ಬರುತ್ತಿದೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ರು..
ದಿವಾಕರ ನಾಯ್ಕ ನುಡಿಸಿರಿ, ಸಿದ್ದಾಪುರ