ದಾಂಡೇಲಿಯಲ್ಲಿ ಸಂಭ್ರಮ, ಸಡಗರದಿಂದ ನಡೆಯುತ್ತಿರುವ ನವರಾತ್ರಿ ಉತ್ಸವ

ದಾಂಡೇಲಿ : ನಗರದ ಹಳೆ ನಗರಸಭೆ ಮೈದಾನದಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಲ್ಲಿ ನವರಾತ್ರಿ ಉತ್ಸವವು ಸಂಭ್ರಮ ಸಡಗರದಿಂದ ನಡೆಯುತ್ತಿದೆ.

ಮಾಜಿ ಶಾಸಕರಾದ ಸುನೀಲ್ ಹೆಗಡೆ ಅವರ ಗೌರವಾಧ್ಯಕ್ಷತೆಯ ಟಿ ಎಸ್ ಬಾಲಮಣಿಯವರ ಅಧ್ಯಕ್ಷತೆಯಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಸರ್ವ ಪದಾಧಿಕಾರಿಗಳು ಮತ್ತು ಸದಸ್ಯರ ಸಹಕಾರದಲ್ಲಿ ನವರಾತ್ರಿ ಉತ್ಸವವು ದಿನದಿಂದ ದಿನಕ್ಕೆ ವಿಜೃಂಭಣೆಯಿಂದ ಜರುಗುತ್ತಿದೆ. ನವರಾತ್ರಿ ಉತ್ಸವ ಸಮಿತಿಯ ನವರಾತ್ರಿ ಸಂಭ್ರಮದಲ್ಲಿ ದಾಂಡೇಲಿಯ ಜನತೆ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.