ಸಿದ್ದಾಪುರ : ಪಟ್ಟಣ ವ್ಯಾಪ್ತಿಯ ಹಾಳದಕಟ್ಟಾದಲ್ಲಿ ಯಾವುದೇ ರೀತಿಯಾದಂತಹ ಮಧ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬಾರದು ಎಂದು ಸ್ಥಳೀಯ ನಿವಾಸಿಗಳು, ವಿವಿಧ ಸಂಘ ಸಂಸ್ಥೆಗಳು ತಹಸೀಲ್ದಾರ್ ಮೂಲಕ ಸಂಬಂಧಪಟ್ಟ ಸಚಿವರು, ಸ್ಥಳೀಯ ಶಾಸಕರು ,ವಿವಿಧ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಪ ಪಂ ವಾರ್ಡ್ ನಂಬರ್ 14, 15 ರಲ್ಲಿ ಅತಿ ಹಿಂದುಳಿದ ಬಡ ಕೂಲಿ ಕಾರ್ಮಿಕರು ಹಾಗೂ ಎಸ್ಸಿ ಎಸ್ಟಿ ಸಮುದಾಯದ ಜನರು ವಾಸಿಸುತ್ತಿದ್ದು ಈ ಭಾಗದಲ್ಲಿ ಹೈಸ್ಕೂಲ್, ಪ್ರಾಥಮಿಕ ಶಾಲೆ, ಪಿ.ಯು ಕಾಲೇಜ್ ಹಾಗೂ ಎಂಟಕ್ಕೂ ಹೆಚ್ಚು ದೇವಸ್ಥಾನಗಳು ಇರುವುದರಿಂದ ಮಧ್ಯದ ಅಂಗಡಿ ತೆರೆಯುವುದರಿಂದ ಯುವಕರು ಮದ್ಯದ ಚಟಕ್ಕೆ ದಾಸರಾಗುವುದಲ್ಲದೆ ಬಡ ಕುಟುಂಬಗಳಲ್ಲಿ ಹಲವಾರು ರೀತಿಯ ಸಮಸ್ಯೆಗಳು ಎದುರಾಗಲಿವೆ, ಯಾವುದೇ ಕಾರಣಕ್ಕೂ ಇಲ್ಲಿ ಮದ್ಯದ ಅಂಗಡಿಯನ್ನು ತೆರೆಯಬಾರದು ಎಂದು ಮುಖಂಡ ಚಂದ್ರು ಕಾನಡೆ ನೇತೃತ್ವದಲ್ಲಿ ಮನವಿ ಸಲ್ಲಿಸಿದರು. ಉತ್ತರ ಕನ್ನಡ ಜಿಲ್ಲಾ ರೈತ ಸಂಘ, ರಕ್ಷಣಾ ವೇದಿಕೆ ಪದಾಧಿಕಾರಿಗಳು ಹಾಗೂ ಸ್ಥಳೀಯ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮುಖಂಡ ಕಿರಣ್ ಕಾನಡೆ ಮಾತನಾಡಿ ಪಟ್ಟಣ ವ್ಯಾಪ್ತಿಯಲ್ಲಿ ತೆರೆಯಲಾದ ಗೂಡಂಗಡಿಗಳನ್ನು ತೆರವುಗೊಳಿಸಲು ಕಾಣದ ಕೈಗಳು ಹುನ್ನಾರ ಮಾಡುತ್ತಿದ್ದಾರೆ ಯಾವುದೇ ಕಾರಣಕ್ಕೂ ಗೂಡ ಅಂಗಡಿ ತೆರವು ಮಾಡಲು ಬಿಡುವುದಿಲ್ಲ ದಲಿತರ ಮೇಲೆ ದೌರ್ಜನಕ್ಕೆ ಬಂದರೆ ಆಮರಣಾಂತ ಉಪವಾಸ ನಡೆಸಲಾಗುವುದು ಎಂದರು. ಬೇಡವೇ ಬೇಡ ಮಧ್ಯದ ಅಂಗಡಿ ಬೇಡ ತೊಲಗಲಿ ತೊಲಗಲಿ ಮಧ್ಯದ ಅಂಗಡಿ ತೊಲಗಲಿ ಎನ್ನುವ ಬೋರ್ಡ್ ಗಳನ್ನು ಹಿಡಿದು ಮಹಿಳೆಯರು ತಹಶೀಲ್ದಾರ್ ಕಚೇರಿ ಎದುರು ವಿರೋಧ ವ್ಯಕ್ತಪಡಿಸಿದರು