ದಾಂಡೇಲಿ : ನಗರದ ಡಿಲೆಕ್ಸ್ ಮೈದಾನದಲ್ಲಿ ನಡೆಯಲಿರುವ ರಾಮಲೀಲೋತ್ಸವ ಕಾರ್ಯಕ್ರಮದಲ್ಲಿ ಸುಡುಮದ್ದುಗಳ ಪ್ರದರ್ಶನಕ್ಕೆ ಅವಕಾಶ ನೀಡಬೇಕೆಂದು ನಗರದ ಅಟಲ್ ಅಭಿಮಾನಿ ಸಂಘಟನೆಯ ಅಧ್ಯಕ್ಷರಾದ ವಿಷ್ಣು ನಾಯರ್ ಅವರು ನಗರದಲ್ಲಿ ಇಂದು ಬುಧವಾರ ಮಾಧ್ಯಮದ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಮಾಡಿದ್ದಾರೆ.
ಅವರು ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ವಿಜಯದಶಮಿಯಂದು ದಾಂಡೇಲಿ ನಗರದ ಡಿಲೆಕ್ಸ್ ಮೈದಾನದಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಶ್ರಯದಡಿ ನಡೆಯಲಿರುವ ಭವ್ಯ ರಾಮಲೀಲೋತ್ಸವ ಕಾರ್ಯಕ್ರಮದಲ್ಲಿ ಈ ಬಾರಿ ಸುಡುಮದ್ದುಗಳ ಪ್ರದರ್ಶನಕ್ಕೆ ಅವಕಾಶ ನೀಡದಿರುವುದು ಸಮಸ್ತ ದಾಂಡೇಲಿಗರಿಗೆ ತೀವ್ರ ಬೇಸರ ತಂದಿದೆ. ದಕ್ಷಿಣ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿರುವ ದಾಂಡೇಲಿಯ ರಾಮಲೀಲೋತ್ಸವ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ದೂರದ ಊರುಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ. ರಾಮಲೀಲೊತ್ಸವದ ಸಂದರ್ಭದಲ್ಲಿ ಆಕರ್ಷಕ ಸುಡುಮದ್ದುಗಳ ಪ್ರದರ್ಶನವನ್ನು ನೋಡಲು ಜನಸಾಗರವೆ ಹರಿದುಬರುತ್ತದೆ. ಹೀಗಿರುವಾಗ ಈ ಬಾರಿ ರಾಮಲೀಲೋತ್ಸವ ಕಾರ್ಯಕ್ರಮವನ್ನು ಎಂದಿನಂತೆ ನಡೆಯುವಂತಾಗಲು ಸುಡುಮದ್ದುಗಳ ಪ್ರದರ್ಶನಕ್ಕೆ ಅನುಮತಿಯನ್ನು ನೀಡಬೇಕೆಂದು ನಗರದ ಅಟಲ್ ಅಭಿಮಾನಿ ಸಂಘಟನೆಯ ಅಧ್ಯಕ್ಷರಾದ ವಿಷ್ಣು ನಾಯರ್ ಅವರು ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಮಾಡಿದ್ದಾರೆ