ದಾಂಡೇಲಿಯಲ್ಲಿ ವೈವಿಧ್ಯಮಯವಾಗಿ ನಡೆಯುತ್ತಿರುವ ನವರಾತ್ರಿ ಉತ್ಸವ

ದಾಂಡೇಲಿ : ನಗರದ ಹಳೆ ನಗರಸಭೆಯ ಮೈದಾನದಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಲ್ಲಿ ಆಯೋಜಿಸಲಾದ ನವರಾತ್ರಿ ಉತ್ಸವವು ಸಂಭ್ರಮ, ಸಡಗರ ಹಾಗೂ ವೈವಿಧ್ಯಮಯವಾಗಿ ಜರುಗುತ್ತಿದೆ.

ಸೋಮವಾರ ಬೆಳಿಗ್ಗೆ ದುರ್ಗಾಮಾತಾ ದೇವಿಗೆ ಪೂಜೆ ಸಲ್ಲಿಸಿ ಆರತಿಯನ್ನು ಬೆಳಗಿ ಸೋಮವಾರದ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ವಿವಿಧ ಪೂಜಾ ವಿಧಿ ವಿಧಾನಗಳ ಜೊತೆಗೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸೋಮವಾರ ಸಂಜೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು ಸ್ಥಳೀಯ ನೃತ್ಯಪಟುಗಳಿಂದ ಭರತನಾಟ್ಯ ಕಾರ್ಯಕ್ರಮ ಜರುಗಿ ಅಪಾರ ಜನಾಕರ್ಷಣೆಗೆ ಪಾತ್ರವಾಯಿತು. ದಾಂಡಿಯಾ ಉತ್ಸವವನ್ನು ಕೂಡ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದೆ.

ಇನ್ನು ಹಳೆ ನಗರಸಭೆಯ ಮೈದಾನದ ಸುತ್ತಲೂ ವಿವಿಧ ತಿಂಡಿ ತಿನಿಸುಗಳ ಮಳಿಗೆಗಳು, ಮಕ್ಕಳ ಮನಸ್ಸು ಗೆಲ್ಲುವ ವಿವಿಧ ಚಟುವಟಿಕೆಗಳು, ಡ್ಯಾನ್ಸಿಂಗ್ ವಿಡಿಯೋ ಗ್ರಾಫಿ ಹೀಗೆ ಮೊದಲಾದ ಚಟುವಟಿಕೆಗಳು ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ. ಒಟ್ಟಿನಲ್ಲಿ ಹಳೆ ನಗರಸಭೆಯ ಮೈದಾನ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಡಿ ನಡೆಯುತ್ತಿರುವ ನವರಾತ್ರಿ ಉತ್ಸವದ ಮೂಲಕ ಕಂಗೊಳಿಸುತ್ತಿದೆ.