ಭಟ್ಕಳ:- ಮಾವಿನ ಕುರ್ವೆ ಬಂದರಿನಲ್ಲಿ ರಿಪೇರಿ ಕಾರ್ಯಕ್ಕಾಗಿ ಲಂಗರೂ ಹಾಕಿ ನಿಲ್ಲಿಸಿಟ್ಟಿದ್ದ ದೋಣಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ದೋಣಿ ಸುಟ್ಟು ಹೋದ ಘಟನೆ ನಡೆದಿದೆ.
ಬಂದರ ನಿವಾಸಿ ಗೋವಿಂದ ನರಸಿಂಹ ಖಾರ್ವಿ ಅವರ ಮಾಲಿಕತ್ವದ ಎಂಜಿಲಾ ಹೆಸರಿನ ದೋಣಿ ಬೆಂಕಿಗೆ ಆಹುತಿಯಾಗಿದ್ದು. ಗೋವಿಂದ ಖಾರ್ವಿ ಎಂಜಿಲಾ ಹೆಸರಿನ ದೋಣಿಯನ್ನು ದೋಣಿವಿಹಾರ ನಡೆಸುವ ಹಿನ್ನೆಲೆಯಲ್ಲಿ ಖರೀದಿ ಮಾಡಿ ರಿಪೇರಿಗಾಗಿ ಬಂದರಿನ ದಡದಲ್ಲಿ ಲಂಗೂರ ಹಾಕಿ ನಿಲ್ಲಿಸಿಟ್ಟಿದ್ರು.
ಪ್ರವಾಸೋದ್ಯಮದಡಿ ವಾಯುವಿಹಾರದ ದೋಣಿಯನ್ನಾಗಿ ಮಾರ್ಪಾಡಿಸಲು ಅಂದಾಜು ಮೂರು ಲಕ್ಷದ ಸಲಕರಣೆಗಳನ್ನು ತಂದು ದೋಣಿಯಲ್ಲಿ ಇರಿಸಿದ್ದರು. ಆದರೆ ಆಕಸ್ಮಿಕ ದೋಣಿಗೆ ಬೆಂಕಿ ತಗುಲಿದ ಹಿನ್ನೆಲೆ ಬೆಂಕಿಯ ಕೆನ್ನಾಲೆಗೆ ದೋಣಿಯ ಸಮೇತ ಎಲ್ಲವೂ ಸುಟ್ಟು ಕರಲಾಗಿದೆ. ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸಿದ್ದಾರೆ . ಅಂದಾಜು 7 ಲಕ್ಷ ರೂ. ಹಾನಿಯಾಗಿದೆ ಎನ್ನಲಾಗ್ತಿದೆ..
ಉದಯ ನಾಯ್ಕ ನುಡಿಸಿರಿ ನ್ಯೂಸ್ ಭಟ್ಕಳ