ಜೋಯಿಡಾ : ತಾಲೂಕು ಕೇಂದ್ರದಲ್ಲಿರುವ ಶ್ರೀ ಸಂತೋಷಿ ಮಾತಾ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ದಸರಾ ಹಬ್ಬದ ನಿಮಿತ್ತವಾಗಿ ದಾಂಡಿಯಾ ಉತ್ಸವವನ್ನು ಆಯೋಜಿಸಲಾಗಿದ್ದು, ಭಾನುವಾರ ರಾತ್ರಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯ್ತು.
ಪ್ರತಿ ವರ್ಷವೂ ಇಲ್ಲಿ ಶ್ರೀ.ಸಂತೋಷಿ ಮಾತಾ ಸನ್ನಿಧಿಯಲ್ಲಿ ದಾಂಡಿಯಾ ಉತ್ಸವವನ್ನು ಸರ್ವಧರ್ಮೀಯರು ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದು, ಈ ವರ್ಷವೂ ಜಾತಿ ಮತ ಬೇಧವೆನ್ನದೇ ಸರ್ವರು ಭಾಗವಹಿಸಿದ್ದಾರೆ.
ಇಂದಿನಿಂದ 9 ದಿನಗಳವರೆಗೆ ಶ್ರೀ ಸ್ವಾಮಿ ಸನ್ನಿಧಿಯಲ್ಲಿ ದಾಂಡಿಯಾ ಉತ್ಸವ ನಡೆಯಲಿದೆ.