ಜೋಯಿಡಾ ತಾಲ್ಲೂಕಿನ ಕುಂಬಾರವಾಡ & ಜಗಲ್ಬೇಟ್ ಹತ್ತಿರ ಅನಧಿಕೃತವಾಗಿ ಮಧ್ಯ ಸೇವನೆಗೆ ಅವಕಾಶ : ಎರಡು ಕಡೆ ಪ್ರಕರಣ ದಾಖಲು

ಜೋಯಿಡಾ : ತಾಲೂಕಿನ ಕುಂಬಾರವಾಡದ ಹತ್ತಿರ ಮತ್ತು ರಾಮನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಜಗಲ್ಬೇಟ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮಧ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟ ಪ್ರತ್ಯೇಕ ಪ್ರತ್ಯೇಕವಾಗಿ ಎರಡು ಪ್ರಕರಣ ದಾಖಲಾದ ಘಟನೆ ನಡೆದಿದೆ.

ತಾಲೂಕಿನ ಕುಂಬಾರವಾಡ ಗ್ರಾಮದ ದಿಗಲಂಬಾ ಬಸ್ ನಿಲ್ದಾಣದ ಕಟ್ಟೆಯ ಮೇಲೆ ಸ್ಥಳೀಯ ನಿವಾಸಿ ದೀಪಕ್ ಗಮಗಾಬಾಯಿ ನಾಯ್ಕ ಎಂಬಾತನು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮುಕ್ತವಾಗಿ ಮಧ್ಯ ಸೇವನೆ ಮಾಡಲು ಅವಕಾಶ ನೀಡಿದ ಸಂದರ್ಭದಲ್ಲಿ ಪಿಎಸ್ಐ ಮಹೇಶ್ ಮಾಳಿ ಅವರ ತಂಡ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ದೀಪಕ್ ಗಮಗಾಬಾಯಿ ನಾಯ್ಕ ಎಂಬಾತನ ಮೇಲೆ ಅಬಕಾರಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ತಾಲೂಕಿನ ಜಗಲ್ಬೇಟ್ ಗ್ರಾಮದಲ್ಲಿ ಸ್ಥಳೀಯ ನಿವಾಸಿ ನಾರಾಯಣ ಗಣಪತಿ ಗಾವಾಡೆ ಎಂಬಾತನು ತನ್ನ ಟೀ‌ ಅಂಗಡಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಸಂದರ್ಭದಲ್ಲಿ ರಾಮನಗರ ಪೊಲೀಸ್ ಠಾಣೆಯ ಪಿಎಸೈ ಬಸವರಾಜ‌ ಮಬನೂರು ಅವರ ನೇತೃತ್ವದ ತಂಡ ದಾಳಿ ಪ್ರಕರಣ ಬೆಳಕಿಗೆ ಬಂದಿದೆ.

ನಾರಾಯಣ ಗಣಪತಿ ಗಾವಾಡೆ ಎಂಬತನ ಮೇಲೆ ಅಬಕಾರಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.