ಹೊನ್ನಾವರ :- ರಾ. ಹೆ 66ರಲ್ಲಿ ಕಂಟೆನರ್ ವಾಹನವೊಂದರ ವಿಲ್ ಜಾಮ್ ಆಗಿ ಟೈರ್ ನಿಂದ ದಟ್ಟ ಹೊಗೆ ಬಂದು, ಬ್ಲಾಸ್ಟ್ ಆಗುವ ಹಂತ ತಲುಪಿದ್ದರೂ, ಕೂಡ ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಕುಮಟಾ ಮಾರ್ಗದಿಂದ-ಭಟ್ಕಳ ಮಾರ್ಗವಾಗಿ ಸಂಚರಿಸುತ್ತಿದ್ದ ಕಂಟೆನರ್ ವಾಹನ ಗೇರುಸೊಪ್ಪ ವೃತ್ತ ಸಮೀಪಿಸುತ್ತಿದ್ದಂತೆ ವಿಲ್ ಜಾಮ್ ಆಗಿತ್ತು. ಟೈರ್ ರಸ್ತೆಗೆ ಸಿಲುಕಿ ಏಕಾಎಕಿ ಹೊಗೆ ಬರಲಾರಂಭಿಸಿತ್ತು. ವಾಹನ ರಸ್ತೆ ಮದ್ಯೆ ನಿಂತ ಪರಿಣಾಮ ಕೆಲಕಾಲ ಹೆದ್ದಾರಿಯಲ್ಲಿ ಟ್ರಾಫೀಕ್ ಜಾಮ್ ಉಂಟಾಗಿತ್ತು.
ಇತರ ವಾಹನ ಸವಾರರು, ಪಾದಾಚಾರಿಗಳು ಕಂಟೆನರ್ ಚಾಲಕನಿಗೆ ಟೈರ್ ಜಾಮ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ರು. ನಿರ್ವಾಹಕ ವಾಹನದಿಂದ ಇಳಿದು ಸಮಸ್ಯೆ ಅವಲೋಕಿಸಿದರೂ, ಪುನಃ ವಾಹನ ಚಲಾಯಿಸಿಕೊಂಡು ಮಿನಿವಿಧಾನ ಸೌಧದವರೆಗೂ ಹೋಗಿದ್ದು, ಇನ್ನೆನು ಟೈರ್ ಬ್ಲಾಸ್ಟ್ ಆಗುವ ಹಂತದಲ್ಲಿರುವಾಗ ಸ್ಥಳೀಯರು ಪೊಲೀಸರಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೋಲೀಸ್ ಸಿಬ್ಬಂದಿ, ತಕ್ಷಣ ವಾಹನವನ್ನು ತಡೆದು, ಚಾಲಕನಿಗೆ ವಾಹನ ದುರಸ್ತಿ ನಡೆಸಿದ ಬಳಿಕ ಮುಂದೆ ತೆರಳುವಂತೆ ಸೂಚಿಸಿದ್ರು. ಇದ್ರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ನಾಗರಾಜ್ ನಾಯ್ಕ, ನುಡಿಸಿರಿ ನ್ಯೂಸ್, ಹೊನ್ನಾವರ..