ಅಂಕೋಲೆಯ ರೇಣುಕಾರ ಸಂಬಾರಬಟ್ಟಲಿಗೆ ಮತ್ತೊಂದು ಗರಿ

ಅಂಕೋಲಾ: ಇಲ್ಲಿನ ಶೆಟಗೇರಿಯ ರೇಣುಕಾ ರಮಾನಂದರ ಮೂರನೆಯ ಕವನ ಸಂಕಲನ “ಸಂಬಾರಬಟ್ಟಲ ಕೊಡಿಸು” ಇದು ಬೆಂಗಳೂರಿನ ಶೂದ್ರ ಹಾಗೂ ನೆಲದಮಾತು ಪ್ರತಿಷ್ಠಾನವು ಜಿ ಎಸ್ ಶಿವರುದ್ರಪ್ಪನವರ ಹೆಸರಿನಲ್ಲಿಟ್ಟಿರುವ ಈ ವರ್ಷದ ಅತ್ಯುತ್ತಮ ಕವನ ಸಂಕಲನ ಬಹುಮಾನವನ್ನು ತನ್ನ ಮುಡಿಗೇರಿಸಿಕೊಂಡಿದೆ.

ಶೂದ್ರ ಪತ್ರಿಕೆಗೆ 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಸಾಹಿತ್ಯ, ರಂಗಭೂಮಿ ಮುಂತಾದವುಗಳಿಗೆ ರಾಷ್ಟ್ರಮಟ್ಟದ ಬಹುಮಾನಗಳನ್ನು ಘೋಷಿಸಲಾಗಿದ್ದು ಕವನ ಸಂಕಲನಕ್ಕಾಗಿಯೇ ಇರುವ ರೇಣುಕಾ ರಮಾನಂದರಿಗೆ ದೊರೆತ ಈ ಬಹುಮಾನವು ರೂ 10,000 ನಗದು, ಪ್ರಶಸ್ತಿ ಫಲಕ ಹಾಗೂ ಸಮ್ಮಾನವನ್ನು ಒಳಗೊಂಡಿದ್ದು ಡಿಸೆಂಬರ್ ಮಾಹೆಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಚ್ ದಂಡಪ್ಪನವರು ತಿಳಿಸಿದ್ದಾರೆ.

ಸಂಬಾರಬಟ್ಟಲ ಕೊಡಿಸು ಸಂಕಲನವು ಈಗಾಗಲೇ ವಿಭಾ ಸಾಹಿತ್ಯ ಪ್ರಶಸ್ತಿ, ಬಳ್ಳಾರಿಯ ಸಂಗಂ ರಾಷ್ಟ್ರೀಯ ಪುರಸ್ಕಾರವನ್ನು ಪಡೆದಿದ್ದು ಇದರ ಕೃತಿಕಾರರಾದ ರೇಣುಕಾ ರಮಾನಂದರು ಅಂಕೋಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.