ಹೊನ್ನಾವರ :- ಎಸ್‌ಡಿಎಂ ಕಾಲೇಜಿನ ಆರ್. ಎಸ್. ಹೆಗಡೆ ಸಭಾಭವನದಲ್ಲಿ ಎಂಪಿಈ ಸೊಸೈಟಿ ಸಹಯೋಗದಲ್ಲಿ ಉಪನ್ಯಾಸಕರಿಗೆ ಹಾಗೂ ಶಿಕ್ಷಕರಿಗೆ ಯೋಗ್ಯತಾ ಕೌಶಲ್ಯಗಳ ಕುರಿತಾದ ದೃಷ್ಠಿಕೋನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..
ಹೊನ್ನಾವರದ ಎಸ್‌ಡಿಎಂ ಕಾಲೇಜಿನ ಆರ್. ಎಸ್. ಹೆಗಡೆ ಸಭಾಭವನದಲ್ಲಿ ಎಂಪಿಈ ಸೊಸೈಟಿ ಸಹಯೋಗದಲ್ಲಿ ಎಸ್‌ಡಿಎಂ ಕಾಲೇಜಯ ಮತ್ತು ಎಂಪಿಈ ಸೆಂಟ್ರಲ್ ಸ್ಕೂಲ್‌ನ ಉಪನ್ಯಾಸಕರಿಗೆ ಹಾಗೂ ಶಿಕ್ಷಕರಿಗೆ ಯೋಗ್ಯತಾ ಕೌಶಲ್ಯಗಳ ಕುರಿತಾದ ದೃಷ್ಠಿಕೋನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ. ಪಿ. ಎಂ. ಹೊನ್ನಾವರ ಮಾತನಾಡಿ, ಶಿಕ್ಷಕರು ತರಬೇತಿಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡು ಸಂಪನ್ಮೂಲ ವ್ಯಕ್ತಿಗಳಾಗಬೇಕು ಎಂದರು.
ಈ ವೇಳೆ ಅಂತರಾಷ್ಟ್ರೀಯ ಮಟ್ಟದ ತರಬೇತುದಾರ ಶ್ರೀನಾಥ್ ಸೇತುರಾಮನ್, ವಿದ್ಯಾರ್ಥಿಗಳಿಗೆ GMAT, ಕೌಶಲ್ಯ ವರ್ಧನೆ, ಕಾರಣ ಮತ್ತು ಸಮರ್ಥನೆ, ವ್ಯವಹಾರಿಕ ಸಂಪರ್ಕ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯಗಳಿಗೆ, ನೀಡಲಾಗುವ ಸಂಕ್ಷಿಪ್ತ ತರಬೇತಿ ಮತ್ತು ಪಠ್ಯಕ್ರಮದ ಕುರಿತು ಮಾಹಿತಿ ನೀಡಿದರು. ಈ ತರಬೇತಿಯನ್ನು ಶಿಕ್ಷಕರು ಪಡೆದು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ಅಣಿಗೊಳಿಸಬೇಕೆಂದು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ವಿವರಿಸಿದ್ರು..
ಈ ವೇಳೆ ಯುಜಿಆರ್‌ಸಿ ನಿರ್ದೇಶಕ ಶಿವರಾಂ ಶಾಸ್ತ್ರಿ ಹಾಗೂ ಐ. ಕ್ಯೂ.ಎ.ಸಿ ಕೋ- ಆರ್ಡಿನೇಟರ್ ಡಾ. ಸುರೇಶ್ ಎಸ್, ಎಂಪಿಇ ಸೊಸೈಟಿಯ ಸಮೂಹ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು ಮತ್ತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ರು…
ಪ್ಲೋ..ಎಂಡ್..
ನಾಗರಾಜ ನಾಯ್ಕ ನುಡಿಸಿರಿ ನ್ಯೂಸ್, ಹೊನ್ನಾವರ