ದಾಂಡೇಲಿ : ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಡಿ ಶಿಕ್ಷಕರಿಗಾಗಿ ಕವಿಗೋಷ್ಠಿ ಹಾಗೂ ಜಿಲ್ಲಾ ಉತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಶನಿವಾರ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭಾ ಸದಸ್ಯ ಮೋಹನ ಹಲವಾಯಿ ಅವರು ನಿರಂತರವಾಗಿ ಕಾರ್ಯಕ್ರಮ ಸಂಘಟಿಸುತ್ತಾ ಬಂದಿರುವ ಕಸಾಪ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ದಾಂಡೇಲಪ್ಪ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಪೂಜಾರಿ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಜಿಲ್ಲಾ ಮತ್ತು ತಾಲ್ಲೂಕು ಕಸಾಪ ವತಿಯಿಂದ ಸನ್ಮಾನಿಸುತ್ತಿರುವುದು ಅತ್ಯಂತ ಅಭಿಮಾನದ ಸಂಗತಿ ಎಂದರು. ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಕನ್ನಡದ ಡಿಂಡಿಮವನ್ನು ಬಾರಿಸುತ್ತಿದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಕನ್ನಡ ಭಾಷೆಯನ್ನು ಪ್ರತಿ ಮನೆ ಮನಗಳಿಗೂ ತಲುಪಿಸುವ ಕಾರ್ಯವನ್ನು ನನ್ನ ಅವಧಿಯಲ್ಲಿ ತಪ್ಪದೆ ಮಾಡಲಿದ್ದು, ಸಹೃದಯಿ ಕನ್ನಡಿಗರ ಬೆಂಬಲ ಮತ್ತು ಪ್ರೋತ್ಸಾಹ ಸದಾ ಇರಲೆಂದರು.
ಜಿಲ್ಲಾ ಉತ್ರಮ ಶಿಕ್ಷಕಿ ಪ್ರಶಸ್ತಿ ಪಡೆದ ವೆಂಕಮ್ಮ
ಗಾಂವಕರ ಮತ್ತು ಶೋಭಾ ಸೋಮ ಕಡೋಲ್ಕರ ರವರುಗಳನ್ನು ಕಸಾಪ ದಾಂಡೇಲಿ ಘಟಕದ ವತಿಯಿಂದ ಸಿಆರ್ ಪಿ ಲಲಿತಾ ಅವರು ಸನ್ಮಾನಿಸಿದರು, ಕಸಾಪ ಸದಸ್ಯ ಪ್ರವೀಣ ನಾಯಕ ಸನ್ಮಾನಿತರನ್ನು ಪರಿಚಯಿಸಿದರು. ವೇದಿಕೆಯಲ್ಲಿ ಕಸಾಪ ಜಿಲ್ಲಾ ಕೋಶಾಧ್ಯಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ ಉಪಸ್ಥಿತರಿದ್ದರು.
ಶಿಕ್ಷಕರುಗಳಾದ ರಾಧಾ ಹೆಗಡೆ, ಕಲ್ಪನಾ ನಾಯಕ, ಮಡಿವಾಳ, ಶಂಶುದ್ದಿನ ಕುಂಕುರ, ನಾಗೇಶ ನಾಯ್ಕ, ನಂದಿನಿ ನಾಯ್ಕ, ಶೋಭಾ ಮುದ್ದಪ್ಪನವರ, ಮಂಜುನಾಥ ನಾಯಕ, ಮಿರ್ಜಾಫರ್ ಶೇಖ್ ಅವರುಗಳು ಕವನ ವಾಚಿಸಿದರು.
ಕಸಾಪ ತಾಲೂಕು ಕೋಶಾಧ್ಯಕ್ಷ ಶ್ರೀಮಂತ ಮದರಿ ಸ್ವಾಗತಿಸಿದರು.ಕಸಾಪ ದಾಂಡೇಲಿ ತಾಲ್ಲೂಕಾಧ್ಯಕ್ಷ ನಾರಾಯಣ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಸದಸ್ಯ ಪ್ರವೀಣಕುಮರ ಸುಲಾಖೆ ಕಾರ್ಯಕ್ರಮವನ್ನು ನಿರೂಪಿಸಿದರು.