ದಾಂಡೇಲಿ : ರೋಟರಿ ಸುಬ್ರಾಯ್ ಕಾಸರಗೋಡ ಮೆಮೋರಿಯಲ್ ರೋಟರಿ ಚಾರಿಟೇಬಲ್ ಆಸ್ಪತ್ರೆ ಶಿರಸಿ, ಲಯನ್ಸ್ ಕ್ಲಬ್ ದಾಂಡೇಲಿ, ವಿ ಆರ್ ಡಿ ಎಂ ಟ್ರಸ್ಟ್ ಹಳಿಯಾಳ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ದಾಂಡೇಲಿ, ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ ಮತ್ತು ಸಾರ್ವಜನಿಕ ಆಸ್ಪತ್ರೆಯ ಸಯುಕ್ತ ಆಶ್ರಯದಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರಕ್ಕೆ ಶುಕ್ರವಾರ ಶಾಸಕರಾದ ಆರ್.ವಿ.ದೇಶಪಾಂಡೆ ಅವರು ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಆರ್.ವಿ.ದೇಶಪಾಂಡೆ ಅವರು ಆರೋಗ್ಯ ಮತ್ತು ಶಿಕ್ಷಣ ರಾಷ್ಟ್ರದ ಅಭಿವೃದ್ಧಿಗೆ ಮಹತ್ವಪೂರ್ಣವಾದ ಶಕ್ತಿ. ಆರೋಗ್ಯ ಕ್ಷೇತ್ರ ಮತ್ತೆ ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ವಿಶೇಷ ಆದ್ಯತೆಯಡಿ ಕೆಲಸವನ್ನು ನಿರ್ವಹಿಸಲಾಗುತ್ತಿದೆ. ನುರಿತ ವೈದ್ಯರಿದ್ದರೆ ಸಾಲದು ಆದರೆ ಅವಶ್ಯ ಮೂಲಸೌಕರ್ಯಗಳು ಕೂಡ ಆಸ್ಪತ್ರೆಗೆ ಅತಿ ಅವಶ್ಯಕ. ಅದೇ ರೀತಿ ಶಾಲೆಗಳು ಇದ್ದರೆ ಸಾಲದು ಪರಿಪೂರ್ಣ ಮೂಲಸೌಕರ್ಯಗಳನ್ನು ಒಳಗೊಂಡಿರುವ ಶಾಲೆ ಮಕ್ಕಳ ಶೈಕ್ಷಣಿಕ ಉನ್ನತಿಗೆ ಸಹಕಾರಿಯಾಗುತ್ತದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಸದೃಢವಾದರೇ ದೇಶ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳಲು ಸಾಧ್ಯ. ಇಂತಹ ಆರೋಗ್ಯ ಶಿಬಿರಗಳು ಬಡಜನರಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇಂತಹ ಶಿಬಿರಗಳಿಗೆ ಸರ್ವರು ಸಹಕರಿಸುವ ಮೂಲಕ ಇಂತಹ ಶಿಬಿರಗಳು ಮೇಲಿಂದ ಮೇಲೆ ನಡೆಯುವಂತಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ, ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ.ಅಖಿಲ್ ಕಿತ್ತೂರು, ಜೋಯಿಡಾ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಿಜಯಕುಮಾರ್ ಕೊಚ್ಚರಗಿ, ಕೆ.ಎಲ್.ಇ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ವಿನಾಯಕ ಪಾಟೀಲ್, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚೌವ್ಹಾಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಆರ್.ಹೆಗಡೆ, ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ವೀರೇಶ್ ಯರಗೇರಿ, ಕಾರ್ಯದರ್ಶಿ ರವಿ ಪೈ, ಖಜಾಂಚಿ ಇಮ್ತಿಯಾಜ್ ಅತ್ತಾರ, ಲಯನ್ಸ್ ಕ್ಲಬಿನ ನಿಕಟಪೂರ್ವ ಅಧ್ಯಕ್ಷರಾದ ಸೈಯದ್ ಇಸ್ಮಾಯಿಲ್ ತಂಗಳ್, ಲಯನ್ಸ್ ಕ್ಲಬಿನ ಪ್ರಮುಖರಾದ ಯು.ಎಸ್.ಪಾಟೀಲ್, ಡಾ.ಶೇಖರ್ ಹಂಚಿನಾಳಮಠ, ಡಾ.ಎನ್.ಜಿ.ಬ್ಯಾಕೋಡ್, ಅನ್ನಪೂರ್ಣ ಬ್ಯಾಕೋಡ್, ಉದಯ ಶೆಟ್ಟಿ, ಡಾ.ನಾಸೀರ್ ಅಹಮ್ಮದ್ ಜಂಗೂಬಾಯಿ, ಅನಿಲ್ ದಂಡಗಲ್, ಮಾರುತಿ ರಾವ್ ಮಾನೆ, ಪಿ.ಕೆ.ಜೋಶಿ, ಗಜಾನನ ಕರಗಾಂವಕರ್, ಮುರಳಿಧರ್ ನಾಯ್ಕ, ಬಾಪು ಗೌಡ, ಪ್ರಸನ್ನ ಅಣ್ವೇಕರ್, ಚೇತನ್ ಕುಮಾರಮಠ, ಗಣೇಶ್ ಖಾನಪುರಿ, ಅಶ್ವಿನ್ ಕುಮಾರ್, ಲತಾ ಶೆಟ್ಟಿ, ಲತಾ ಪಾಟೀಲ್, ಸವಿತಾ ಯರಗೇರಿ, ಗೀತಾ ಅಶ್ವಿನ್ ಕುಮಾರ್, ಶಾರದಾ ದಂಡಗಲ್, ಮಂಜುಳಾ ಗಜಾನನ, ಸುಮಂಗಲಾ ಚಿಕ್ಕಮಠ್, ಶಕುಂತಲಾ ಶೆಟ್ಟಿ, ಲಿಯೋ ಕ್ಲಬಿನ ಅಧ್ಯಕ್ಷೆ ಗುಲಾಂ ಅಲಿ ತೋಟಗಟ್ಟಿ, ಕಾರ್ಯದರ್ಶಿ ಹಬೀಬುಲ್ ರೆಹಮಾನ್ ಶೇಖ ಮತ್ತು ರೋಟರಿ ಆಸ್ಪತ್ರೆಯ ವೈದ್ಯರು ಮೊದಲಾದವರು ಉಪಸ್ಥಿತರಿದ್ದರು.