ಡಾ.ಅವಧಾನಿಯವರ ಅಂತಿಮ ದರ್ಶನ ಪಡೆಯಲು ಹರಿದು ಬಂದ ಜನಸಾಗರ

ಹೊನ್ನಾವರ : ಹಲವು ದಶಕಗಳಿಂದ ಕಣ್ಣಿನ ಆಸ್ಪತ್ರೆ ನಡೆಸುತ್ತಿದ್ದ ಕರ್ಕಿ ಮೂಲದ ಹಿರಿಯ ವೈದ್ಯ ರಾಗಿದ್ದ ಡಾ. ಯು. ಕೆ. ಅವಧಾನಿ ಅವರು ಇಹಲೋಕ ತ್ಯಜಿಸಿದ್ದಾರೆ. ಕರ್ಕಿಯಲ್ಲಿ ಅವಧಾನಿಯವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು…

ರೋಗಿಗಳ ಪಾಲಿನ ಆಪತ್ಬಾಂಧವ.. ಬಡವರ ಪಾಲಿನ ದೇವರು.. ಹಲವು ದಶಕಗಳ ಕಾಲ ನೇತ್ರತಜ್ಞರಾಗಿ ಸೇವೆ ಸಲ್ಲಿಸಿದ ದೀಮಂತ.. ಆದ್ರಿವತ್ತು ಅದೇ ನೇತ್ರತಜ್ಞ ಕಣ್ಣು ಮುಚ್ಚಿದ್ದಾರೆ. ಕೊವಿಡ್‌ ಸಮಯದಲ್ಲಿ ಜಗತ್ತೇ ಬೆಚ್ಚಿಬಿದ್ದಿದ್ರೂ, ಆ ಸಮಯದಲ್ಲೂ ತಮ್ಮ ಕ್ಲಿನಿಕ್‌ಗೆ ಬಂದು ಸೇವೆ ಸಲ್ಲಿಸುತ್ತಿದ್ದ ಗಟ್ಟಿಗ.. ಆದ್ರಿವತ್ತು ಅದೇ ಗಟ್ಟಿಗ ಎಂದೂ ಬಾರದ ಲೋಕಕ್ಕೆ ತೆರಳಿದ್ದಾರೆ…

ಹೌದು.. ಡಾ.ಉಮೇಶ ಕೃಷ್ಣ ಅವಧಾನಿಯವರು ಇಹಲೋಕ ತ್ಯಜಿಸಿದ್ದಾರೆ. ಅವಧಾನಿಯವರು ಇನ್ನಿಲ್ಲ ಅನ್ನೋ ಸುದ್ದಿ ಹೊನ್ನಾವರ – ಕುಮಟಾ ಭಾಗದ ಜನತೆಗೆ ಬರಸಿಡಿಸಲು, ಬಡಿದಂತಾಗಿದೆ. ಅಕ್ಷರಷಃ ಹೊನ್ನಾವರ ಮೌನಕ್ಕೆ ಶರಣಾಗಿದೆ. ಜನಸಾಮಾನ್ಯರ ವೈದ್ಯರೆಂದೇ ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಡಾ.ಉಮೇಶ್‌ ಕೃಷ್ಣ ಅವಧಾನಿ, ಗುರುವಾರ ತುಮಕೂರಿನಲ್ಲಿರುವ ತಮ್ಮ ಸಹೋದರಿಯೆ ಮನೆಗೆ ಹೋಗಿದ್ರು. ಗುರುವಾರ ಮಧ್ಯಾಹ್ನ ಊಟ ಮಾಡಿದ ಮಲಗಿದ ಡಾ.ಅವಧಾನಿಯವರಿಗೆ ಹೃದಯಾಘಾತವಾಗಿದೆ. ಅಷ್ಟೇ.. ನೇತ್ರತಜ್ಞ ಅಲ್ಲೇ ಚಿರನಿದ್ರೆಗೆ ಜಾರಿದ್ದಾರೆ… ಅವಧಾನಿಯವರು ಇನ್ನಿಲ್ಲ ಅನ್ನೋ ಸುದ್ದಿ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಶುಕ್ರವಾರ ಬೆಳಗ್ಗೆ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಅವಧಾನಿಯವರ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಅವಧಾನಿಯವರ ಅಂತಿಮ ದರ್ಶನ ಪಡೆಯಲು ಹೊನ್ನಾವರ – ಕುಮಟಾ ಭಾಗದಿಂದ ಸಾಗರೋಪಾದಿಯಲ್ಲಿ ಜನರು ಹರಿದು ಬಂದಿದ್ರು…

ಸಾಗರೋಪಾದಿಯಲ್ಲಿ ಹರಿದು ಬಂದಿದ್ದ ಜನಸಾಗರ ಚಿರನಿದ್ರೆಗೆ ಜಾರಿದ ಅವಧಾನಿಯವರಿಗೆ ಅಂತಿಮ ನಮನ ಸಲ್ಲಿಸಿತು. ಪ್ರತಿಯೊಬ್ಬರು ತಮ್ಮ ನೆಚ್ಚಿನ ವೈದ್ಯರಿಗೆ ಕಣ್ಣೀರ ವಿದಾಯ ಹೇಳಿದ್ರು. ಈ ವೇಳೆ ಅವಧಾನಿಯರು ಇಬ್ಬರು ಪುತ್ರಿಯರು, ಪತ್ನಿ ಮತ್ತು ಕುಟುಂಬದವರು ಮೌನಕ್ಕೆ ಶರಣಾಗಿದ್ರು
ಗಣ್ಯರು ಕೂಡ ಅವಧಾನಿಯವರ ಅಂತಿಮ ದರ್ಶನ ಪಡೆದ್ರು. ಅವಧಾನಿಯವರು ಬಡವರ ಪಾಲಿನ ಆಶಾಕಿರಣವಾಗಿದ್ರು. ಅವಧಾನಿಯವರಂತ ವೈದ್ಯರು ಮತ್ತೊಬ್ಬರು ಹುಟ್ಟಿ ಬರಲು ಸಾಧ್ಯವಿಲ್ಲ ಅಂತ ಶಾಸಕ ದಿನಕರ್‌ ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ರು ಹೊನ್ನಾವರದ ರಥಬೀದಿ ಮತ್ತು ಕರ್ಕಿಯಲ್ಲಿ ಕ್ಲಿನಿಕ್‌ ನಡೆಸುತ್ತಿದ್ದ ಡಾ.ಅವಧಾನಿಯವರು ಪ್ರತಿ ನಿತ್ಯ ತಪ್ಪದೇ ಕ್ಲಿನಿಕ್‌ಗೆ ಭೇಟಿ ನೀಡುತ್ತಿದ್ರು. ನನ್ನ ಹತ್ತಿರ ಚಿಕಿತ್ಸೆ ಪಡೆಯೋಕೆ ಬರುವವರು ಬಡವರು ಅನ್ನೋ ಏಕೈಕ ಕಾರಣಕ್ಕೆ ಅವಧಾನಿಯವರು ಪ್ರತಿ ನಿತ್ಯ ಕ್ಲಿನಿಕ್‌ಗೆ ಬಂದು ಸೇವೆ ಸಲ್ಲಿಸುತ್ತಿದ್ರು. ವೈದ್ಯರಾಗಿ ಅವಧಾನಿಯವರು ಮಕ್ಕಳು ಮರಿ ತಿಂದ್ರೂ ಕರಗದಷ್ಟು ಆಸ್ತಿ ಪಾಸ್ತಿಯನ್ನು ಸಂಪಾದಿಸಬಹುದಿತ್ತು. ಆದ್ರೆ ಆರೋಗ್ಯ ಸೇವೆಯೇ ದೇವರ ಸೇವೆ ಎಂದು ಭಾವಿಸಿ, ಇಡಿ ಜೀವನವನ್ನು ಪಲಾಪೇಕ್ಷೆಯಿಲ್ಲದೇ ನಡೆಸಿದ್ರು. ಇದೇ ಕಾರಣಕ್ಕೆ ಅವಧಾನಿಯವರನ್ನು ವೈದ್ಯ ವೃತ್ತಿಗೇ ಕುಲತೀಲಕ ಅಂತ ಹೊನ್ನಾವರದ ಜನ ಹಾಡಿ ಹೊಗಳುವುದು… ಒಟ್ನಲ್ಲಿ ಹೊನ್ನಾವರದ ಜನತೆ ಅಪರೂಪದ ವೈದ್ಯರನ್ನು ಕಳೆದುಕೊಂಡು ಶೋಕಸಾಗರದಲ್ಲಿದ್ದಾರೆ…