ಜಲಜೀವನ್ ಮಿಷನ್ ಅಡಿಯಲ್ಲಿ ಮನೆ‌‌ ಮನೆಗೆ ನೀರು ಸಂಪರ್ಕ‌‌ ಕಾಮಗಾರಿಯ ಲೋಕಾರ್ಪಣೆ

ಹಳಿಯಾಳ ತಾಲ್ಲೂಕಿನ ಗೋಲೆಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಮನೆ‌‌ ಮನೆಗೆ ನೀರು ಸಂಪರ್ಕ‌‌ ಕಾಮಗಾರಿಯ ಲೋಕಾರ್ಪಣೆ

ಹಳಿಯಾಳ‌ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಹಳಿಯಾಳ ಇವರ ಆಶ್ರಯದಡಿ ತಾಲೂಕಿನ ಗೋಲೆಹಳ್ಳಿ ಗ್ರಾಮದಲ್ಲಿ ಮನೆ‌‌ ಮನೆಗೆ ನೀರು ಸಂಪರ್ಕ‌‌ ಒದಗಿಸುವ ಕಾಮಗಾರಿಗೆ ಶುಕ್ರವಾರ ಶಾಸಕ ಆರ್.ವಿ.ದೇಶಪಾಂಡೆಯವರು ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆಯವರು ಗ್ರಾಮೀಣ ಭಾಗದಲ್ಲಿ ಕ್ರಿಯಾತ್ಮಕ ಮನೆಯ ಟ್ಯಾಪ್ ಸಂಪರ್ಕಗಳ ಮೂಲಕ ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರನ್ನು ಕಲ್ಪಿಸಲು ಜಿಲ್ಲಾಪಂಚಾಯತ್ ಕಾರವಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಹಳಿಯಾಳ ಇವರ ಆಶ್ರಯದಲ್ಲಿ 2022-23 ನೇ ಸಾಲಿನ ಜಲ ಜೀವನ ಮಿಷನ್ ಯೋಜನೆಯಡಿ ರೂ : 55 ಲಕ್ಷ ಮೊತ್ತದಲ್ಲಿ 220 ಜನ ವಸತಿ ಮನೆಗಳಿಗೆ ಪೈಪ್ ಲೈನ್ ಅಳವಡಿಸಿ ನಳ ಸಂಪರ್ಕವನ್ನು ಒದಗಿಸಲಾಗಿದೆ. ಈ ಭಾಗದ ಜನರ ಕುಡಿಯುವ ನೀರಿನ‌ ಬವಣೆಯನ್ನು ಪರಿಹರಿಸುವ ನಿಟ್ಟಿನಲ್ಲಿ ವಿಶೇಷ ಆಧ್ಯತೆಯಡಿ ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದೆ ಎಂದರಲ್ಲದೇ ನೀರನ್ನು ಹಿತವಾಗಿ ಬಳಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.