ಭಟ್ಕಳ: ವಿಶ್ವ ಹಿಂದು ಪರಿಷತ್ ಭಜರಂಗದಳ ಕರ್ನಾಟಕ ಉತ್ತರ ಪ್ರಾಂತ ಭಟ್ಕಳ ಘಟಕದಿಂದ ಶೌರ್ಯ ಜಾಗರಣ ರಥಯಾತ್ರೆಯು ಸೋಮವಾರದಂದು ಮುರುಡೇಶ್ವರದಿಂದ ಭಟ್ಕಳ ತನಕ ಅದ್ದೂರಿಯಾಗಿ ಜರುಗಿತು.
ಶೌರ್ಯ ಜಾಗರಣ ಯಾತ್ರೆ ಸೆಪ್ಟೆಂಬರ್ 30 ರ ಶನಿವಾರ ಮುಂಜಾನೆ ಶಿರಸಿ ಯ ಮಾರಿಕಾಂಬಾ ದೇವಾಲಯದಿಂದ ಹೊರಟು ಅಕ್ಟೋಬರ್ 1 ಭಾನುವಾರ ಸಂಜೆ 6 ಘಂಟೆಗೆ ಮಾವಿನಗುಂಡಿ ಮಾರ್ಗವಾಗಿ ಶ್ರೀ ಕ್ಷೇತ್ರ ಬಂಗಾರಮಕ್ಕಿ ಮೂಲಕ ರಥ ಆಗಮಿಸಿ ಅಲ್ಲಿ ವಾಸ್ತವ್ಯ ಮಾಡಲಾಯಿತು.ಅಕ್ಟೋಬರ್ 2 ಸೋಮವಾರ ಬೆಳಿಗ್ಗೆ 8 ಕ್ಕೆ ಬಂಗಾರಮಕ್ಕಿ ಯಿಂದ ಪ್ರಸ್ಥಾನದಿಂದ ಕವಲಕ್ಕಿಗೆ
11 ಘಂಟೆಗೆ ಬಂದು ಅಲ್ಲಿಂದ ನೇರವಾಗಿ ಶ್ರೀ ಕ್ಷೇತ್ರ ಮುರ್ಡೇಶ್ವರಕ್ಕೆ ಪುರ ಪ್ರವೇಶ ಮಾಡಿದ್ದು ಭವ್ಯ ಸ್ವಾಗತ ಮಾಡಲಾಯಿತು. ನಂತರ ಮುರುಡೇಶ್ವರದ ಓಲಗ ಮಂಟಪದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಅಲ್ಲಿಂದ ನಂತರ ಮಧ್ಯಾಹ್ನ 2:30ಕ್ಕೆ ಮುರುಡೇಶ್ವರದಿಂದ ಶಿರಾಲಿಯ 4-30 ಕ್ಕೆ ಹಳೆಕೋಟೆ ಸಾರದಹೊಳೆ ದೇವಸ್ಥಾನದಿಂದ ಸ್ವಾಗತಿಸಿ ಅಲ್ಲಿಂದ ಮೆರವಣಿಗೆ ಮೂಲಕ ಶಿರಾಲಿ ಪೇಟೆ ಆಂಜನೇಯ ದೇವಸ್ಥಾನದ ಹತ್ತಿರ ಕಾರ್ಯಕ್ರಮವನ್ನು ನೆರವೇರಿಸಿ ಅಲ್ಲಿಂದ ಅದ್ದೂರಿ ಮೆರವಣಿಗೆಯೊಂದಿಗೆ 6 ಗಂಟೆಗೆ ಭಟ್ಕಳದ ಮುಖ್ಯ ವೃತ್ತದಲ್ಲಿ ವಿಶ್ವ ಹಿಂದು ಪರಿಷತ ಭಜರಂಗದಳದ ಪ್ರಮುಖರು ಆಂಜನೇಯನ ಮೂರ್ತಿಗೆ ಹೂವಿನ ಹಾರ ಹಾಕಿ ಪುರ ಪ್ರವೇಶದ ನಂತರ ಸ್ವಾಗತಿಸಿಕೊಂಡರು.
ನಂತರ ಸಾವಿರಾರು ಹಿಂದು ಸಮಸ್ತರ ನೇತ್ರತ್ವದಲ್ಲಿ ಮುಖ್ಯವೃತ್ತದಿಂದ ಭಟ್ಕಳ ನಗರದ ಮುಖ್ಯ ರಸ್ತೆಯ ಮೂಲಕ ಅದ್ದೂರಿ ಮೆರವಣಿಗೆಯೊಂದಿಗೆ ಮಹಿಳೆಯರ ಕುಣಿತ ಭಜನೆ ತಂಡಗಳ ಸಹಯೋಗದೊಂದಿಗೆ ಚಂಡೆ ವಾದ್ಯದ ಮೂಲಕ
ನಗರ ಸಂಚಾರವನ್ನು ಮುಗಿಸಿ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದ ಆವರಣಕ್ಕೆ ಬಂದು ತಲುಪಿತು.ಸಭಾ ಕಾರ್ಯಕ್ರಮದಲ್ಲಿ ಭಜರಂಗದಳದ ಜಿಲ್ಲಾ ಸಂಚಾಕರು, ಶೌರ್ಯ ಜಾಗರಣ ರಥಯಾತ್ರೆಯ ರಥ ಪ್ರಮುಖ ಅಮಿತಕುಮಾರ ಮಾತನಾಡಿ ‘ ಶೌರ್ಯ ಜಾಗರಣಾ ರಥಯಾತ್ರೆಯ ಮುಖ್ಯ ಉದ್ದೇಶವು ಮಲಗಿರುವ ಹಿಂದು ಸಮಾಜವನ್ನು ಬಡಿದೆಬ್ಬಿಸುವ ಕಾರ್ಯವನ್ನು ಈ ರಥಯಾತ್ರೆಯ ಮೂಲಕ ಮಾಡುತ್ತಿದ್ದೇವೆ. ಮುಸ್ಲಿಂ ಕ್ರೈಸ್ತರ ದಬ್ಬಾಳಿಕೆಯನ್ನು ಹಿಮ್ಮೆಟ್ಟಿಸುವ ಕಾರ್ಯ ಮಾಡಬೇಕಿದೆ. ಮಂಗಳವಾರದಂದು ಮಂಕಿಯಿಂದ ಕುಮಟಾ ಅಂಕೋಲಾ ಕಾರವಾರ ಮಾರ್ಗವಾಗಿ ಜೋಯಿಡಾದಿಂದ ಶಿರಸಿಯಲ್ಲಿ ಬ್ರಹತ ಸಭೆಯ ಮೂಲಕ ಮುಕ್ತಾಯಗೊಳ್ಳಲಿದೆ ಎಂದರು.
ವಿಶ್ವ ಹಿಂದು ಪರಿಷತ್ತು ಜಿಲ್ಲಾ ಧರ್ಮಚಾರಿ ಸಂಪರ್ಕ ಪ್ರಮುಖ ಪತಂಜಲಿ ವೀಣಾಕರ ಮಾತನಾಡಿ ‘ ನಮ್ಮ ಪೂರ್ವಜರು ಅಂದು ಸಾಕಷ್ಟು ಶ್ರಮವಹಿಸಿ ಸನಾತನ ಧರ್ಮವನ್ನ ರಕ್ಷಿಸಿ ಉಳಿಸಿಕೊಂಡು ನಮ್ಮ ಇಂದಿನ ಪೀಳಿಗೆಯ ತನಕ ನಡೆಸಿಕೊಂಡು ಬಂದಿದ್ದಾರೆ ಅದನ್ನು ಇಂದಿನ ಪೀಳಿಗೆಗೆ ತಿಳಿಸುವ ಹಾಗೂ ನಮ್ಮಲ್ಲರ ಇತಿಹಾಸವನ್ನು ಸ್ಮರಿಸಿಕೊಳ್ಳುವುದಾಗಿದೆ. 2500 ವರ್ಷಗಳ ಹಿಂದೆ ನಮ್ಮ ಮೇಲೆ ನಿರಂತರ ದಬ್ಬಾಳಿಕೆ ಆಕ್ರಮಣ ನಡೆದಿದ್ದು ಅವೆಲ್ಲವನ್ನು ಹಿಮ್ಮೆಟ್ಟಿಸಿದ್ದೇವೆ. ನಮ್ಮ ಸನಾತನ ಸಂಸ್ಕೃತಿಯನ್ನು ವಿಜ್ರಮಿಸುವಂತಹ ಕೆಲಸ ನಾವೆಲ್ಲ ಹಿಂದುಗಳು ಮಾಡಬೇಕಿದೆ. ನಮ್ಮಲ್ಲಿನ ಶೌರ್ಯವನ್ನು ಜಾಗೃತಗೊಳಿಸಿ ಪುನರುಜ್ಜೀವನಗೊಳಿಸಬೇಕಿದೆ ಎಂದರು.
ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಂಕರ ಶೆಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ವಿಶ್ವ ಹಿಂದು ಪರಿಷತ್ ಪ್ರಮುಖರಾದ ರಾಮನಾಥ ಬಳಗಾರ, ಗೋವಿಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಶ್ರೀಕಾಂತ ನಾಯ್ಕ, ಶ್ರೀನಿವಾಸ ನಾಯ್ಕ, ದೀಪಕ ನಾಯ್ಕ, ಮುಕುಂದ ನಾಯ್ಕ ಸೇರಿದಂತೆ ವಿಶ್ವ ಹಿಂದು ಪರಿಷತ್, ಭಜರಂಗದಳದ ಪ್ರಮುಖರು ಉಪಸ್ಥಿತರಿದ್ದರು.ನಂತರ ಭಟ್ಕಳದ ಪ್ರಸಿದ್ಧ ಶ್ರೀ ನಾಗಯಕ್ಷೇ ಧರ್ಮ ಸಂಸ್ಥಾನದ ಧರ್ಮಾರ್ಥ ಸಭಾಭವನದ ಆವರಣದಲ್ಲಿ ತಂಗಲಿದ್ದು, ಅಕ್ಟೋಬರ್ 3 ಮಂಗಳವಾರ ಬೆಳಿಗ್ಗೆ 8 ಕ್ಕೆ ಭಟ್ಕಳದಿಂದ ಹೊರಟು ಬೆಳಿಗ್ಗೆ 9-30 ರಿಂದ 10-30 ಮಂಕಿಯಲ್ಲಿ ಕಾರ್ಯಕ್ರಮ, 12-30 ರಿಂದ 1-30 ಹೊನ್ನಾವರ ನಗರದಲ್ಲಿ ಕಾರ್ಯಕ್ರಮದ ಬಳಿಕಮಧ್ಯಾಹ್ನ 4 ರಿಂದ 5 ರ ವರೆಗೆ ಹಳದೀಪುರ ಕಾರ್ಯಕ್ರಮ ದ ನಂತರ ಸಂಜೆ 5-30 ರಿಂದ 6 ರ ವರೆಗೆ ಶ್ರೀ ಕ್ಷೇತ್ರ ಧಾರೇಶ್ವರದಲ್ಲಿ ಪುರ ಪ್ರವೇಶ ಮಾಡಲಿದೆ. ಆ ಬಳಿಕ ಸಂಜೆ 6-30 ಕ್ಕೆ ಕುಮಟಾ ನಗರ ಸಂಚಾರ ಹಾಗೂ ಕಾರ್ಯಕ್ರಮ, ಕುಮಟಾದಲ್ಲಿ ವಾಸ್ತವ್ಯಗೊಂಡು ರಥಯಾತ್ರೆ ಮುಂದುವರೆಯಲಿದೆ.