ಹಳ್ಳಿ ಮನೆ ಬೀಗ ಮುರಿದ ಕಳ್ಳರಿಗೆ ನಿರಾಶೆ – ಕೈಗೆ ಸಿಕ್ಕ ಸಿಗರೇಟ್ ಪ್ಯಾಕೇಟ್ ದೋಚಿದ ಕಳ್ಳರು

ಭಟ್ಕಳದ ಮಣ್ಕುಳಿಯ ಹಳ್ಳಿ ಮನೆ ಹೋಟೆಲಿನ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು, ಹಣದ ಸಿಗದೇ ನಿರಾಶೆಗೊಂಡು ಅಲ್ಲೇ ಇದ್ದ ಸಿಗರೇಟ್ ಪ್ಯಾಕೇಟಗಳನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ…ಭಟ್ಕಳದ ಮಣ್ಕುಳಿಯ ಹಳ್ಳಿ ಮನೆ ಹೋಟೆಲಿನ ಬಾಗಿಲು ಮುರಿದು ಒಳ ನುಗ್ಗಿದ ಮುಸುಕು ದಾರಿ ಕಳ್ಳರು, ಹಣ ಸಿಗದಿದ್ದಕ್ಕೆ ನಿರಾಶೆಗೊಂಡು ಅಲ್ಲೇ ಇದ್ದ ಸಿಗರೇಟ್ ಪ್ಯಾಕೇಟಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ ಕಳ್ಳರು ಮೊದಲು ಹೋಟೆಲ್ ಮುಂಭಾಗದಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮರದ ವೈಯರ್ ಕಟ್ ಮಾಡಿದ್ದಾರೆ. ಬಳಿಕ ಒಳ ನುಗ್ಗಿ ಕ್ಯಾಶ್ ಕೌಂಟರ್ ಬಳಿಯಿದ್ದ ಇನ್ನೋಂದು ಸಿಸಿಟಿವಿಯಲ್ಲಿ ದ್ರಶ್ಯ ಸೆರೆಯಾಗದಂತೆ, ಬೇರೆ ಕಡೆಗೆ ತಿರುಗಿಸಿ ಬಳಿಕ ಕಳ್ಳತನಕ್ಕೆ ಇಳಿದಿದ್ದಾರೆ.
ಆದರೆ ಕಳ್ಳರು ಅಂದುಕೊಂಡಂತೆ ಹೋಟೆಲ್‌ನಲ್ಲಿ ಹೆಚ್ಚಿನ ನಗದು ಸಿಗಲಿಲ್ಲ. ಅಲ್ವ ಸ್ವಲ್ಪ ನಗದನ್ನು ದೋಚುವ ಜೊತೆಗೆ ಸಾವಿರಕ್ಕೂ ಅಧಿಕ ಮೌಲ್ಯದ ಸಿಗರೇಟ್ ಪ್ಯಾಕೆಟ್ ಕದ್ದು ಪರಾರಿಯಾಗಿದ್ದಾರೆ. ಕಳ್ಳರು ಕಳ್ಳತನಕ್ಕೆ ಬರುವ ದ್ರಶ್ಯಗಳು ಮಾತ್ರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…