ಭಾರತೀಯ ಪರಂಪರೆ ನೆನಪಿಸಿಕೊಳ್ಳುವ ಪ್ರಯತ್ನ ಶೌರ್ಯ ಜಾಗರಣಾ ರಥಯಾತ್ರೆ- ಚರ್ಕವರ್ತಿ ಸೂಲಿಬೆಲೆ

ಭಟ್ಕಳ: ವಿಶ್ವ ಹಿಂದು ಪರಿಷತ್ ಭಜರಂಗದಳ ಕರ್ನಾಟಕ ಉತ್ತರ ಪ್ರಾಂತ ಭಟ್ಕಳ ಘಟಕದಿಂದ ಶೌರ್ಯ ಜಾಗರಣ ರಥಯಾತ್ರೆಯು ಶಿರಾಲಿಯ ಪೇಟೆ ಹನುಮಂತ ದೇವಸ್ಥಾನದ ಆವರಣದಲ್ಲಿ ನಮೋ ಬ್ರೀಗೇಡ್ ಸಂಸ್ಥಾಪಕ ಚರ್ಕವರ್ತಿ ಸೂಲಿಬೆಲೆ ಪಾಲ್ಗೊಂಡರು.

ನಮೋ ಬ್ರೀಗೇಡ್ ವತಿಯಿಂದ ಮತ್ತೊಮ್ಮೆ ಮೋದಿ ಜನಗಣಮನ ಬೈಕ ರ್ಯಾಲಿ ಹಿನ್ನೆಲೆ ಶಿರೂರಿನಿಂದ ಹೊನ್ನಾವರದ ಕಡೆಗೆ ತೆರಳುವ ವೇಳೆ ಮಾರ್ಗ ಮಧ್ಯೆ ಪಾಲ್ಗೊಂಡು ಮಾತನಾಡಿದರು.ನಂತರ ಮಾತನಾಡಿದ ಅವರು ‘ಶೌರ್ಯ ಜಾಗರಣ ರಥಯಾತ್ರೆಯೆನ್ನುವುದು ಭಾರತೀಯ ಪರಂಪರೆಯನ್ನು ನೆನಪಿಸಿಕೊಳ್ಳುವ ಪ್ರಯತ್ನವಾಗಿದೆ. ಈ ಪರಂಪರೆಯು ನಮ್ಮದಲ್ಲ ಎಂಬುವವರಿಗೆ ನಡುವೆ ಇದು ನಮ್ಮದು ಎಂದು ಉಳಿಸಿ ಬೆಳೆಸಿಕೊಳ್ಳುವ ದಿನದ ಹಿನ್ನೆಲೆ ಈ ರಥಯಾತ್ರೆಯ ಉದ್ದೇಶವಾಗಿದೆ.
ಈ ಹಿಂದೆ ರಾಮಮಂದಿರದ ನಿರ್ಮಾಣದ ಸಂಕಲ್ಪದ ವೇಳೆ ಇದೇ ರೀತಿ ರಥಯಾತ್ರೆ ನಡೆದಾಗ ಕೆಲವರು ಇದರಿಂದ ಯಾವ ಪ್ರಯೋಜನ ಇದೆ ಎಂಬುವವರ ಪ್ರಶ್ನೆಗೆ ಜನವರಿ 22ರಿಂದ 25 ರ ತನಕ ಅಯೋದ್ಯೆಯಲ್ಲಿ ಭವ್ಯ ರಾಮಮಂದಿರದ ಲೋಕಾರ್ಪಣೆಯು ರಾಮ ಹುಟ್ಟಿದ ಜಾಗದಲ್ಲಿ ನಡೆಯುತ್ತಿರುವುದು ದೇಶಕ್ಕೆ ಹಾಗೂ ಹಿಂದುಗಳು ಹೆಮ್ಮೆ ಪಡುವ ಸಂಗತಿಯಾಗಿದೆ.

ಸಮಸ್ತ ಹಿಂದುಗಳ ದ್ರಢ ಸಂಕಲ್ಪ ವಾದ ರಾಮ ಮಂದಿರವು ರಾಮನ ಜನ್ಮ ಸ್ಥಳದಲ್ಲಿಯೇ ಮಾಡಲಿದ್ದೇವೆ ಎಂಬುದು ಇಂದು ಸಾಕಾರಗೊಳ್ಳುತ್ತಿದೆ. 500 ವರ್ಷಗಳ ಹೋರಾಟದ ಮಾಡಿ ಮಂದಿರವನ್ನು ಪಡೆದುಕೊಂಡ ಇತಿಹಾಸ ಜಗತ್ತಿನಲ್ಲಿ ಭಾರತದ ರಾಮ‌ಮಂದಿರ ಮಾತ್ರ ಸಾಧ್ಯ.ಇಡೀ ಜಗತ್ತಿನಲ್ಲಿ ಹಿಂದು ಧರ್ಮದ ಈಗ ವ್ಯಾಪಕವಾದ ಮನ್ನಣೆ ಗೌರವ ಲಭಿಸುತ್ತಿದೆ. ಅನೇಕ ಮತ ಪಂಥಗಳು ಇತರರನ್ನು ಕೊಲ್ಲಲು ಇರುವ ವೇಳೆ ಅತ್ತ ಹಿಂದು ಧರ್ಮ ಇತರರನ್ನು ಉದ್ದಾರ ಮಾಡುವ ಧರ್ಮವಾಗಿ ಹಾಗೂ ಭಾರತ ಹಿಂದು ದೇಶವಾಗಿದೆ ಎಂದು ಜಗತ್ತು ಒಪ್ಪಿಕೊಂಡಿದೆ. ಇಂಗ್ಲೆಂಡ್ ಪ್ರಧಾನಿ ನಾನು ಒಬ್ಬ ಹಿಂದು ಎಂದು ಒಪ್ಪಿಕೊಂಡಿದ್ದಾರೆ.

ಜಾಗತಿಕವಾಗಿ ಭಾರತಕ್ಕೆ ಹಿಂದು ಧರ್ಮದ ಗೌರವ ಉಳಿಸಿದ ಕೀರ್ತಿ ನರೇಂದ್ರ ಮೋದಿ ಅವರನ್ನು ಸ್ಮರಿಸಿಕೊಳ್ಳಬೇಕಾಗಿದೆ. ರಾಮ ಮಂದಿರ ಪುನರ್ ನಿರ್ಮಾಣ, ಕಾಶಿಯ ವಿಶ್ವನಾಥ ದೇವಸ್ಥಾನದ ಅಭಿವೃದ್ಧಿ, ಉಜ್ಜಯಿನಿಯ ಮಹಾಕಾಲ, ಚಾರಧಾಮ್ ಮತ್ತು ಕೇದಾರನಾಥನ ರಕ್ಷಣೆ, ಗಂಗಾ ಆರತಿ ನೋಡಲು ಜನರು ಭಾರತಕ್ಕೆ ಬರುತ್ತಿರುವುದು ದುಬೈನಲ್ಲಿ ದೇವಾಲಯ ನಿರ್ಮಾಣ ಹಾಗೂ ಗಂಟಾನಾದಕ್ಕೆ ರಾಷ್ಟ್ರದ ಜನರ ಹೋರಾಟದ ಜೊತೆಗೆ ಇವೆಲ್ಲದರ ನೇತೃತ್ವದ ವಹಿಸಿದ ನರೇಂದ್ರ ಮೋದಿ ಅವರ ಕಾರಣದಿಂದಲೇ ಸಾಧ್ಯವಾಗಿದೆ. ಈ ಹಿನ್ನೆಲೆ ರಾಷ್ಟ್ರದ ಜನರು ನಾವೆಲ್ಲರೂ ಶೌರ್ಯದಿಂದ ದೇಶವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಭಜರಂಗದಳ ಕರ್ನಾಟಕ ಉತ್ತರ ಪ್ರಾಂತ ಭಟ್ಕಳ ಘಟಕ ಪ್ರಮುಖರಾದ ಶಂಕರ ಶೆಟ್ಟಿ, ರಾಮನಾಥ ಬಳಗಾರ, ಗೋವಿಂದ ನಾಯ್ಕ ಮುಂತಾದ ಹಿಂದು ಸಂಘಟನೆಯ ಕಾರ್ಯಕರ್ತರು ಇದ್ದರು.