ಯಲ್ಲಾಪುರ ದಲ್ಲಿ ರಾಜ್ಯ ಅರಣ್ಯ ಗುತ್ತಿಗೆದಾರ ಸಂಘದ ಗೌರವಾಧ್ಯಕ್ಷ ದತ್ತಮೂರ್ತಿ ಹೆಗಡೆಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಯಲ್ಲಾಪುರದಲ್ಲಿ ರಾಜ್ಯ ಅರಣ್ಯ ಗುತ್ತಿಗೆದಾರ ಸಂಘದ ಗೌರವಾಧ್ಯಕ್ಷ ದತ್ತಮೂರ್ತಿ ಹೆಗಡೆಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.
ನಗರದಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ದತ್ತಮೂರ್ತಿ ಹೆಗಡೆ, “ನನ್ನ ಗೌರವಕ್ಕೆ ಚ್ಯುತಿ ಬರುವಂತೆ, ಬ್ರಾಹ್ಮಣ ಜಾತಿ ಸೂಚಕ ಬಳಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾನೆ. ಜಾತಿಯ ಹೆಸರಿನಲ್ಲಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸಲು ಯತ್ನಿಸುತ್ತಿದ್ದಾನೆ. ಅಪರಿಚಿತ ವ್ಯಕ್ತಿಯಾಗಿದ್ದು, ಬೇರೆ ಬೇರೆ ಸಂಖ್ಯೆಯಿಂದ ಕರೆ ಮಾಡಿ ಕೆಟ್ಟ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆಂದು ಹೇಳಿದ್ರು..
ಬ್ರಾಹ್ಮಣ ಸಮಾಜದ ಮೇಲೆ ಜಾತಿ ನಿಂದನೆ ಮಾಡಿ, ಅವರ ಕರ್ತವ್ಯಕ್ಕೆ ಧಕ್ಕೆ ಉಂಟು ಮಾಡಲಾಗಿದೆ. ಇದನ್ನು ಗುತ್ತಿಗೆದಾರರ ಸಂಘ ತೀವ್ರವಾಗಿ ಖಂಡಿಸುತ್ತದೆ. ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳದಿದ್ರೆ, ಉಗ್ರ ಹೋರಾಟ ನಡೆಸಲಾಗುವುದೆಂದು ಗುತ್ತಿಗೆದಾರ ದ್ಯಾಮಣ್ಣ ಬೋವಿವಡ್ಡರ್ ಹೇಳಿದ್ರು.. ಈ ವೇಳೆ ಗುತ್ತಿಗೆದಾರರಾದ ಸಂತೋಷ ನಾಯ್ಕ ಕೋಳಿಕೇರಿ, ಗೋವಿಂದ ಬಸಾಪುರ, ಮಾರುತಿ ಬೋವಿವಡ್ಡರ್, ಹನುಮಂತ ಕೊರವರ್, ಸುರೇಶ, ಕಾರ್ತಿಕ ಹೆಗಡೆ ಸೇರಿದಂತೆ ಇತರರು ಉಪಸ್ಥಿತರಿದ್ರು.