ಯಲ್ಲಾಪುರ: ಹದಗೆಡುತ್ತಿರುವ ಆರೋಗ್ಯಕ್ಕೆ ಮೂಲ ಕಾರಣ ನಾವು ಬಳಸುತ್ತಿರುವ ಆಹಾರ ಪದ್ಧತಿಯ ಲೋಪವೇ ಆಗಿದೆ ಎಂದು ಬಿಆರ್ಸಿ ಸಮನ್ವಯಾಧಿಕಾರಿ ಶ್ರೀರಾಮ್ ಹೆಗಡೆ ಹೇಳಿದರು.
ಅವರು ಯಲ್ಲಾಪುರದ ಹೊಲಿ ರೋಜರಿ ಸಭಾಭವನದಲ್ಲಿ ತಾಲೂಕ ಮಟ್ಟದ ವಿಜ್ಞಾನ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜಂಕ್ ಪುಡ್ ಸೇವನೆಯಿಂದ ದೇಹಕ್ಕೆ ಬೇಡದ ರಸಾಯನಿಕ ಸೇರಿ ಆರೋಗ್ಯ ಹದಗೆಡುತ್ತದೆ ಎಂದರು.
ಸಿರಿಧಾನ್ಯಗಳ ಬಗೆಗೆ ಅದರ ಅದ್ಭುತ ಆಹಾರ ಅಥವಾ ರೂಡಿಗತ ಪಥ್ಯಾಹಾರ ಎಂಬ ವಿಷಯದ ಕುರಿತು ತಾಲೂಕಿನ 19 ಪ್ರೌಢಶಾಲೆಗಳ ವಿದ್ಯಾರ್ಥಿಗಳು ವಿಚಾರ ಮಂಡಿಸಿದರು. ಬಿ ಆರ್ ಪಿ ಸಂತೋಷ್ ಜಿಗುಳೂರ್ ಶಿಕ್ಷಣ ಸಂಯೋಜಕ ಪ್ರಶಾಂತ ಜಿಎನ್ ವಿಜ್ಞಾನ ಬಳಗದ ಶಿಕ್ಷಕ ನಿತೀಶ್ ತೊರ್ಕೆ,ಕರಾವಿಪ ಜಿಲ್ಲಾ ಸಂಚಾಲಕ ಎಂ ರಾಜಶೇಖರ,ಶಿಕ್ಷಕರಾದ ಸದಾನಂದ ದಬಗಾರ,ಗಜಾನನ ಭಟ್ ಇದ್ದರು.
ಹೋಲಿ ರೋಜರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಫಾದರ್ ರೇಮಂಡ್ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು.