ಯಲ್ಲಾಪುರ: ರಾಮಾಯಣ,ಮಹಾಭಾರತದಂತ ಮಹಾ ಕಾವ್ಯಗಳು ನಮ್ಮ ಕಷ್ಟ, ನಷ್ಟಗಳಲ್ಲಿ ಅವು ಹಾಸುಹೊಕ್ಕು, ಸದಾ ನಮ್ಮೊಳಗಿನ ಸಾಕ್ಷಿ ಪ್ರಜ್ಞೆಯಯಾಗಿರುತ್ತವೆ ಎಂದು ಅರ್ಥಧಾರಿ ಚಂದ್ರಕಲಾ ಭಟ್ಟ ಇಡಗುಂದಿ ಹೇಳಿದರು.
ಅವರು ಉಮ್ಮಚಗಿ ಸಹಕಾರಿ ಸಂಘದ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಉಮ್ಮಚಗಿ ಮಕ್ಕಳ ಘಟಕ ಆಯೋಜಿಸಿದ್ದ ‘ನಾ ಕಂಡಂತೆ ಲಕ್ಷ್ಮಣ- ಲಕ್ಷ್ಮಣ ಇನ್ನಷ್ಟು’ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಾದ ಸನ್ನಿಧಿ ಮಹೇಶ್ ಹೆಗಡೆ,ಪವನ ಸೇವನ, ಶರಜಾ ಭಟ್ಟ, ನವ್ಯಾ ಹೆಗಡೆ, ಸಿಂಧೂರ ಹೆಗಡೆ, ಪರ್ಣಿಕಾ ಹೆಗಡೆ, ಪ್ರೇರಣಾ ಭಟ್ಟ, ದೀಪಿಕಾ ಭಟ್ಟ, ಅವನಿ ಭಟ್ಟ,ಸಾತ್ವಿಕ್ ಹೆಗಡೆ, ಸುಮಾ ಭಟ್ಟ, ಪ್ರಿಯಾ ಭಟ್ಟ, ಇಂದ್ರಾಣಿ ಭಟ್ಟ, ತೇಜಸ್ವಿ ಗಾಂವ್ಕಾರ, ಪುಷ್ಕರಾ ಕೆ.ಎನ್. ಮೊದಲಾದವರು ಲಕ್ಷ್ಮಣ ಇನ್ನಷ್ಟು ವಿಷಯದ ಕುರಿತು ಮಾತನಾಡಿದರು.
ಅ.ಭಾ.ಸಾ.ಪ.ದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ನಾರಾಯಣ ಶೇವಿರೆ ಕಾರ್ಯಕ್ರಮ ಅವಲೋಕನ ಮಾಡಿದರು. ಅ.ಭಾ.ಸಾ.ಪ.ದ ರಾಜ್ಯ ಕಾರ್ಯದರ್ಶಿ ರಘನಂದನ ಭಟ್ಟ, ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ, ಮುಖ್ಯ ಕಾರ್ಯನಿರ್ವಾಹಕ ರಾಮಕೃಷ್ಣ ಹೆಗಡೆ ಕನೇನಳ್ಳಿ, ಕವಯಿತ್ರಿ ಸುಜಾತಾ ಹೆಗಡೆ ಕಾಗಾರಕೊಡ್ಲು, ವಾಣಿ ಹೆಗಡೆ ಉಪಸ್ಥಿತರಿದ್ದರು.