ದಾಂಡೇಲಿ : ನಗರದ ಹಳೆ ದಾಂಡೇಲಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗೆ ಸುಣ್ಣ ಬಣ್ಣವನ್ನು ಹಚ್ಚಿ ಶಾಲೆಯ ಹಳೆ ವಿದ್ಯಾರ್ಥಿಗಳ ತಂಡವೊಂದು ಶೈಕ್ಷಣಿಕ ಕಾಳಜಿಯನ್ನು ಮೆರೆದಿದೆ.
ಶಾಲೆಯ ಹಳೆ ವಿದ್ಯಾರ್ಥಿ ಚಿತ್ರ ಕಲಾವಿದ ಮತ್ತು ಸ್ವತ: ಪೈಂಟರ್ ಹಾಗೂ ಪೈಟಿಂಗ್ ಗುತ್ತಿಗೆದಾರರಾಗಿರುವ ಸೀತಾಕಾಂತ ಮೇಸ್ತ ಅವರ ನೇತೃತ್ವದಲ್ಲಿ ಹಳೆ ವಿದ್ಯಾರ್ಥಿಗಳ ತಂಡ ತಮ್ಮ ಸ್ವಂತ ಖರ್ಚಿನಿಂದ ಶಾಲೆಗೆ ಸುಣ್ಣ ಬಣ್ಣವನ್ನು ಹಚ್ಚಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ಕಾರ್ಯದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳಾದ ಅನಿಲ್ ಪಾಟ್ನೇಕರ್, ಸಂತೋಷ ಚೌವ್ಹಾಣ್, ಶಿವಾನಂದ, ಎಸ್.ಎಂ.ಭಟ್, ಮಾಲಾ, ಪದ್ಮಜಯ, ಅಕ್ಷತಾ ಮೊದಲಾದವರು ಕೈ ಜೋಡಿಸಿದ್ದಾರೆ.