ದಾಂಡೇಲಿ : ಶ್ರೀ.ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ನಿಮಿತ್ತ ನಗರದ ಟೌನಶಿಪ್ ನಲ್ಲಿರುವ ಶ್ರೀ.ರಾಘವೇಂದ್ರ ಮಠದಲ್ಲಿ ಶನಿವಾರ ಶ್ರದ್ಧಾಭಕ್ತಿಯಿಂದ ಹಾಗೂ ಸಂಭ್ರಮ, ಸಡಗರದಿಂದ ರಥೋತ್ಸವ ನಡೆಯಿತು.
ಗುರುವಾರದಿಂದ ಆರಂಭಗೊಂಡ ಶ್ರೀ.ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಇಂದು ಸಂಜೆ ಸಂಪನ್ನಗೊಳ್ಳಲಿದೆ. ಇಂದು ಶ್ರೀ.ಸ್ವಾಮಿ ಸನ್ನಿಧಿಯಿಂದ ಆರಂಭಗೊಂಡ ರಥೋತ್ಸವವು ನಗರದ ಜೆ.ಎನ್.ರಸ್ತೆಯಲ್ಲಿರುವ ಶ್ರೀ.ಮಾರುತಿ ಮಂದಿರದವರೆಗೆ ಬಂದು ಶ್ರೀ.ಮಾರುತಿ ದೇವಸ್ಥಾನದ ಆವರಣದಲ್ಲಿ ಪೂಜೆಯನ್ನು ಸಲ್ಲಿಸಿ ಆನಂತರ ಶ್ರೀ.ರಾಘವೇಂದ್ರ ಮಠಕ್ಕೆ ತೆರಳಿ ಅಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ ಬಳಿಕ ರಥೋತ್ಸವವನ್ನು ಸಂಪನ್ನಗೊಳಿಸಲಾಯ್ತು.
ರಥೋತ್ಸವದಲ್ಲಿ ಮಹಿಳೆಯರ ಕೋಲಾಟ ಗಮನ ಸೆಳೆಯಿತು. ಇಂದು ಬೆಳಿಗ್ಗೆಯಿಂದಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಶ್ರೀ.ಸನ್ನಿಧಿಗೆ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಮಹಾಪೂಜೆಯಾದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ.ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಯಶಸ್ಸಿಗೆ ಶ್ರೀ.ರಾಘವೇಂದ್ರ ಮಠದ ಆಡಳಿತ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಶ್ರಮಿಸಿದ್ದರು.