ದಾಂಡೇಲಿಯ ಸೋಮಾನಿ ವೃತ್ತದಲ್ಲಿ ದ್ವಿಚಕ್ರ ವಾಹನಗಳ‌ ನಡುವೆ ಅಪಘಾತ

ದಾಂಡೇಲಿ : ನಗರದ ಸೋಮಾನಿ ವೃತ್ತದಲ್ಲಿ ಎರಡು ದ್ವಿಚಕ್ರ ವಾಹನಗಳ‌ ನಡುವೆ ಅಪಘಾತವಾಗಿ ಪತಿ-ಪತ್ನಿ ಇಬ್ಬರಿಗೂ ಗಾಯವಾದ ಘಟನೆ ಶನಿವಾರ ನಡೆದಿದೆ.

ನಗರದ ಅಂಬೆವಾಡಿಯ ನಿವಾಸಿ ರವಿ ಜೋಶಿ ಎಂಬವರು ತಮ್ಮ ನಾಲ್ಕು ವರ್ಷದ ಮಗಳನ್ನು ಭಟ್ ಆಸ್ಪತ್ರೆಗೆ ಪತ್ನಿ ಸಹಿತ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸೋಮಾನಿ ವೃತ್ತದಿಂದ ಭಟ್ ಆಸ್ಪತ್ರೆಗೆ ಹೋಗುವಾಗ ಹಿಂಬದಿಯಿಂದ ಬಂದ ದ್ವಿಚಕ್ರ ವಾಹನವೊಂದು ಅಪಘಾತ ಪಡಿಸಿ‌ ಪರಾರಿಯಾಗಿದೆ.

ಈ ಸಮಯದಲ್ಲಿ ರವಿ ಜೋಶಿ ಮತ್ತು ಅವರ ಪತ್ನಿಗೆ ಗಾಯವಾಗಿದೆ. ತಕ್ಷಣವೇ ಗಾಯಗೊಂಡವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿದೆ. ಘಟನಾ ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.