ಮನೆಯಂಗಳದಲ್ಲಿ ಸಂಘ ನೀಡಿದ ಗೌರವ ಸಂತಸ ತಂದಿದೆ – ನಿವೃತ್ತ ಶಿಕ್ಷಕಿ ರಾಜಮ್ಮ ನಾಯಕ.

ಅಂಕೋಲಾ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ನಿವೃತ್ತ ಶಿಕ್ಷಕರನ್ನು ಮನೆ ಅಂಗಳದಲ್ಲಿ ಸನ್ಮಾನಿಸಿ ಗೌರವಿಸುವ ವಿಶಿಷ್ಟ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಬಂದಿದೆ. ಇತ್ತೀಚಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೇಲಿನಗುಳಿಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿಯನ್ನು ಹೊಂದಿದ ಶಿಕ್ಷಕಿ ರಾಜಮ್ಮ ನಾಯಕರವರನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಅಂಕೋಲಾವತಿಯಿಂದ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜಮ್ಮ ನಾಯಕ ನಿರಂತರ 39 ವರ್ಷಗಳ ಶಾಲಾ ವಿದ್ಯಾರ್ಥಿಗಳ ಒಡನಾಟ ಅವಿಸ್ಮರಣೀಯವಾದದು. ಇಂದು ಹೃದಯ ತುಂಬಿ ಬಂದಿದೆ. ಧನ್ಯತಾಭಾವದಿಂದ ಕಂಡ ಎಲ್ಲರನ್ನೂ ನೆನಪಿಸಿಕೊಳ್ಳುತ್ತೇನೆ. ನನ್ನ ಸಂಘ ನನ್ನ ಮನೆಬಾಗಿಲಿಗೆ ಬಂದು ನನ್ನನ್ನು ಗೌರವಿಸಿ ಬೀಳ್ಕೊಟ್ಟಿರುವುದು ಸಂತಸವನ್ನು ತಂದಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ಅಧ್ಯಕ್ಷ ಜಗದೀಶ ಜಿ ನಾಯಕ ಹೊಸ್ಕೇರಿ ಮಾತನಾಡಿ, ರಾಜಮ್ಮ ನಾಯಕರ ಸರಳ,ಸಜ್ಜನ ವ್ಯಕ್ತಿತ್ವ ಶಿಕ್ಷಕರಿಗೆ ಆದರ್ಶಪ್ರಾಯ. ಇವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಸ್ಮರಣೀಯವಾದದು. ತಮ್ಮ ಮಗಳಾದ ಹೇಮಾ ನಾಯಕರನ್ನು ಸರಕಾರಿ ಶಾಲೆಯಲ್ಲಿ ಓದಿಸಿ ಐಎಎಸ್ ನಂತಹ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುವಂತೆ ಮಾಡಿರುವಲ್ಲಿ ರಾಜಮ್ಮನಾಯಕ ದಂಪತಿಗಳ ಕೊಡುಗೆ ಅಪಾರವಾದುದು. ಇಡೀ ಶಿಕ್ಷಕರ ಸಮುದಾಯ ಹೆಮ್ಮೆ ಪಡುತ್ತದೆ ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಟಿ ನಾಯಕ, ಸುಂಕಸಾಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸದಾನಂದ ನಾಯಕ, ಶಾಲಿನಿ ನಾಯಕ, ಮೀನಾ ನಾಯಕ, ಶೇಖರ ಗಾಂವಕರ ಅಭಿನಂದಿಸಿ ಮಾತನಾಡಿದರು.ಸಂಘದ ಉಪಾಧ್ಯಕ್ಷೆ ಭಾರತಿ ಬಿ ನಾಯಕ ಸದಸ್ಯರಾದ ಆನಂದು ವಿ ನಾಯ್ಕ, ಸಂಜೀವ ಆರ್ ನಾಯಕ, ವಿನಾಯಕ ಪಿ ನಾಯ್ಕ, ವೆಂಕಮ್ಮ ನಾಯಕ, ಶೋಭಾ ನಾಯಕ ರಾಜಮ್ಮ ನಾಯಕರ ಕುಟುಂಬದ ಹಿತೈಷಿಗಳಾದ ರವೀಂದ್ರ ಬಿ ನಾಯಕ, ಮಹೇಶ ನಾಯಕ ಹಿಚ್ಕಡ, ಶಾಂತಲಾ ನಾಯಕ, ದೀಪಾ ನಾಯಕ ಮುಂತಾದವರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಎಚ್ ನಾಯಕ ಸ್ವಾಗತಿಸಿದರು. ಉಪಾಧ್ಯಕ್ಷ ಮಂಜುನಾಥ ವಿ ನಾಯಕ ವಂದಿಸಿದರು. ಶಾಂತರಾಮ ನಾಯಕ ಮತ್ತು ಪವನ ಶಾಂತಾರಾಮ ನಾಯಕ ಸಹಕರಿಸಿದರು.