ಸಿದ್ದಾಪುರದಲ್ಲಿ ಪುಟ್ಪಾತ್‌ ಮೇಲಿನ ಅಂಗಡಿಗಳ ತೆರವು ಕಾರ್ಯ

ಸಿದ್ದಾಪುರ : ಪಟ್ಟಣದ ರಾಜಮಾರ್ಗದ ಫುಟ್ಬಾತ್ ಮೇಲಿರುವ ಅಂಗಡಿಗಳನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ತೆರವುಗೊಳಿಸುತ್ತಿರುವ ದೃಶ್ಯ ಶುಕ್ರವಾರ ಕಂಡುಬಂದಿತು. ಫುಟ್ಬಾತ್ ಮೇಲೆ ಅಂಗಡಿಗಳನ್ನು ತೆರೆದಿರುವುದರಿಂದ ಸಾರ್ವಜನಿಕರಿಗೆ ಪಾದಾಚಾರಿಗಳಿಗೆ ಹಲವು ರೀತಿಯ ತೊಂದರೆಗಳು ಎದುರಾಗುತ್ತಿದ್ದು ವಾಹನ ಸವಾರರಿಗೆ ಅಡಚಣೆ ಉಂಟಾಗುತ್ತಿತ್ತು . ಈ ವಿಷಯವನ್ನು ಪಟ್ಟಣ ಪಂಚಾಯತ್ ಗಮನಕ್ಕೆ ಸಾರ್ವಜನಿಕರು ತಂದಿದ್ದರು. ಇತ್ತೀಚೆಗೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ರಾಜಮಾರ್ಗದ ಫುಟ್ಬಾತ್ ಮೇಲಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ತೀರ್ಮಾನವನ್ನು ಕೈಗೊಳ್ಳಲಾಗಿತ್ತು.
ಈ ರೀತಿ ಏಕಏಕಿಯಾಗಿ ಅಂಗಡಿಗಳನ್ನು ತೆರವುಗೊಳಿಸಿದರೆ ಇದನ್ನೇ ನಂಬಿಕೊಂಡು ದಿನನಿತ್ಯ ಬದುಕನ್ನು ನಡೆಸುತ್ತಿರುವ ನಮಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಇದನ್ನ
ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು
ತಬ್ರೇಜ್ ಅಂಗಡಿಕಾರ ವ್ಯಾಪಾರಸ್ಥರ ಪರ ತಮ್ಮ ಅಳಲನ್ನ ತೋಡಿಕೊಂಡರು.