ಯಲ್ಲಾಪುರ ತಾಲೂಕಿನ ಉಮ್ಮಚ್ಗಿ ಗ್ರಾಮ ಪಂಚಾಯತವು ಸ್ವಚ್ಚತೆ ಮತ್ತು ತ್ಯಾಜ್ಯಗಳ ಸರಿಯಾದ ನಿರ್ವಹಣೆಗಳಿಗಾಗಿ ಜಿಲ್ಲಾ ಪಂಚಾಯತವು ಕೊಡುವ ‘ಸ್ವಚ್ಛ ಸರ್ವೇಕ್ಷಣ ಗ್ರಾಮೀಣ’ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ.
ಕಾರವಾರದ ಜಿಪಂ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಈ ಪ್ರಶಸ್ತಿಯನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಉಮ್ಮಚ್ಗಿ ಗ್ರಾಮ ಪಂಚಾಯತದ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಮತ್ತು ಪಿಡಿಒ ನಸ್ರೀನಾ ಎಕ್ಕುಂಡಿ ಅವರಿಗೆ ಕೊಡಮಾಡಿದರು.
ಈ ಸಂದರ್ಭದಲ್ಲಿ ಸರಕಾರದ ಪ್ರಧಾನ ಕಾರ್ಯದರ್ಶಿ ರಿತೀಶ್ ಕುಮಾರ ಸಿಂಗ್, ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಮತ್ತು ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಶಸ್ತಿ ಲಭಿಸಿದ ಖುಷಿಯಲ್ಲಿ ಮಾತನಾಡಿದ ಉಮ್ಮಚ್ಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಕೆಲವು ವರುಷಗಳಿಂದ ನಮ್ಮ ಪಂಚಾಯತವು ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಡೆಸಿಕೊಂಡು ಬಂದಿದ್ದು, ಅದಕ್ಕೆ ಮುಖ್ಯ ಕಾರಣರಾದ ಕಾರ್ಮಿಕರನ್ನು ಮರೆಯುವಂತಿಲ್ಲ. ಅಲ್ಲದೆ ಪಿಡಿಒ, ಸಿಬ್ಬಂದಿ ವರ್ಗ, ಉಪಾಧ್ಯಕ್ಷರು ಮತ್ತು ಎಲ್ಲ ಸದಸ್ಯರು, ಊರ ನಾಗರೀಕರ ಪ್ರಮುಖ ಪಾತ್ರವನ್ನು ಸ್ಮರಿಸಿಕೊಳ್ಳುತ್ತೇನೆ ಎಂದರು.