ಯಲ್ಲಾಪುರ: ತಾಲೂಕಿನ ಮಂಚಿಕೇರಿಯ ನಿವೃತ್ತ ಶಿಕ್ಷಕ, ಹಿರಿಯ ಪತ್ರಕರ್ತ ಪದ್ಮಾಕರ ಶಂಕರ ಫಾಯ್ದೆ (85) ಬುಧವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಬಂಧು ಬಳಗವಿದೆ.
ಮಂಚಿಕೇರಿಯ ರಾಜರಾಜೇಶ್ವರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇರಿ ಮೂರು ದಶಕ ಕಾಲ ಕಾರ್ಯನಿರ್ವಹಿಸಿದ್ದರು. ವಿವಿಧ ಪತ್ರಿಕೆಗಳ ವರದಿಗಾರರಾಗಿ ದಶಕಗಳ ಕಾಲ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿದ್ದರು.
ಹಿಂದಿ ಶಿಕ್ಷಕ ಸಂಘ, ಗ್ರಾಹಕ ಹಿತರಕ್ಷಣಾ ಸಂಘದಲ್ಲಿ ಪದಾಧಿಕಾರಿಯಾಗಿದ್ದರು. ಒಂದು ಅಂಚೆ ಕಾರ್ಡ್ ಮೂಲಕ ಸರ್ಕಾರಕ್ಕೆ ಮಂತ್ರಿ ಗಳಿಂದ ಬರಬೇಕಿದ್ದ ಒಂದು ಕೋಟಿ ರೂ ಬಾಕಿಯನ್ನು ಖಜಾನೆಗೆ ಭರಿಸುವ ಕೆಲಸ ಮಾಡಿ ಶ್ಲಾಘನೆಗೆ ಪಾತ್ರರಾಗಿದ್ದರು.
ಸ್ಟಾಂಪ್ ಸಂಗ್ರಹ, ಕ್ಯಾಲೆಂಡರ್, ನಾಣ್ಯ, ದೇಶವಿದೇಶದ ಬಾವುಟ, ನೋಟುಗಳ ಸಂಗ್ರಹದ ಹವ್ಯಾಸದಿಂದ ತಮ್ಮ ಮನೆಯನ್ನೇ ಒಂದು ಸಂಗ್ರಹಾಲಯವಾಗಿ ಮಾಡಿದ್ದು ಇವರ ವಿಶೇಷತೆಯಾಗಿತ್ತು.